ಸ್ನೇಹದಲ್ಲಿ ಅಡ್ಡಿಯಾಗದ ಜಾತಿ ಮತ ಪ್ರೀತಿಯ ಮಧ್ಯೆ ಮಾತ್ರ ಏಕೆ ಚೀನಾದ ಮಹಾಗೊಡೆಯಾಗಿ ನಿಲ್ಲುತ್ತದೆ?! ಭಾರತೀಯ ಸಮಾಜವೇ ವಿಶ್ವದ ಏಳು ಅದ್ಬುತಗಳಲ್ಲಿ ಮೊದಲನೆಯದು.. ಅಲ್ವಾ?
ಒಟ್ಟಿಗೆ ಓದುತ್ತೇವೆ, ಬರೆಯುತ್ತೇವೆ, ಕಲಿಯುತ್ತೇವೆ, ಕಳಿಸುತ್ತೇವೆ.. ಸ್ನೇಹ ಎನ್ನುವ ಸೇತುವೆ ಎರಡು ಎದೆಗಳ ನಡುವೆ ಕಲ್ಲು ಮಣ್ಣು ನೀರಿಲ್ಲದೇ ಉದ್ಭವವಾಗುವ ಕ್ರಿಯೆಯಂತೂ ಅತಿ ಸೋಜಿಗವಾದುದು. ಸ್ನೇಹದಿಂದ ಶುರುವಾದ ಸೇತುವೆ ಹಲವು ಬಾರಿ ಸ್ನೇಹವಾಗಿ ಉಳಿಯಬಹುದು, ಉಳಿಯದೆ ಸಹ ಇರಬಹುದು. ಉಳಿಯದೆ ಇರುವ ಸ್ನೇಹ ಅಂತ್ಯದಲ್ಲಿ ಪ್ರೀತಿಯಾಗಿ ಬದಲಾಗುವುದಾದರೂ ಹೇಗೆ? ಹೇಗೆ? ಹೇಗೆ?
ಅದೆಷ್ಟು ಸಾರಿ ಕೇಳಿಗೊಂಡರೂ ಉತ್ತರ ಸಿಗುವುದಿಲ್ಲ ಅಲ್ಲವೇ..? ಅದೇ ಕಣ್ರೀ ಮನಸ್ಸೆಂಬ ಮಾಯಾಲೋಕ.. ನಮ್ಮ ಮಾತು ಅದು ಕೇಳೋ ಹಾಗಿದ್ದಿದ್ರೆ ಅದೆಷ್ಟು ಚೆನ್ನಾಗಿತ್ಟಲ್ವೇ?
ಅನ್ಯ ದೇಶೀಯ ಸಂಸ್ಕೃತಿಗಳನ್ನ ಹೆಚ್ಚಾಗಿ ನೋಡಿದಾಗ ಅಲ್ಲಿ ಪ್ರೀತಿಗೆ, ಅಥವಾ ಪ್ರೀತಿಯೆಂದೆರ್ಪಟ್ಟ ಮದುವೆಗೆ ಸಾಮಾನ್ಯವಾಗಿ ಒಪ್ಪಿಗೆಇರುತ್ತದೆ. ಆದರೆ ಭಾರತೀಯ ಸಂಸ್ಕೃತಿಯೆಕೆೀದಕ್ಕೆ ಸ್ಪಂದಿಸುವುದಿಲ್ಲ ಅಂತ ಯಾರಿಗೂ ಅನಿಸುವುದಿಲ್ಲವೇ. ನಾ ಪ್ರೀತಿಗೆ ಬಿದ್ದು ಈ ಮಾತನ್ನು ಹೇಳ್ತಾ ಇಲ್ಲ. ಒಬ್ಬ ಗೆಳೆಯನಿಗೆ ಗೆಳೆಯನಾಗಿ ಈ ಮಾತು ನನ್ನ ಕಾದಿದ್ದಂತೂ ನಿಜ.
ಹೀಗೆ ಊಟದ ಸಮಯದಲ್ಲಿ ಸಹೋದ್ಯೋಗಿಯೋರ್ವ ಆತನ ಆರು ವರ್ಷಗಳ ಪ್ರೀತಿ ಕಮರಿ ಹೋಗುತ್ತೀರೋ ರೀತಿಯನ್ನು ತನ್ನದೇ ಗುಂಗಿನಲ್ಲಿ ಬಣ್ಣಿಸುತ್ತಿದ್ದ ಕ್ಷಣದಲ್ಲಿ ನಾ ಅಲ್ಲಿರಲಿಲ್ಲ. ಮುಂದಿನ ಆಗು ಹೋಗುಗಳ ಮನಸ್ಸಿನ ಕಸಿವಿಸಿಗಳ ನೋವಿನ ಕೆಸರಿನ ಲೋಕದಲ್ಲಿ ಸಿಕ್ಕಿಕೊಂಡಿದ್ದೆ.
ಪ್ರೀತಿಯೇ ಹಾಗೆ.. ನೊಂದಷ್ಟು ಸಹ ನೋಯಿಸುವುದು.. ಬಡ್ಡಿ ಮಗಂದು ಎಷ್ಟು ಮಾಡಿದರೂ ಸಹ ಬೇಡ ಅನಿಸೋದಿಲ್ಲ.. ನೋಯಿಸಿದರೂ ಸಹ ಎರಡು ಪೆಗ್ ವ್ಯಾಟ್ ೬೯ ಗಿಂತ ತಲೆ ಹಿಡಿಸುತ್ತದೆ. ಅದ್ರಲ್ಲಿ ಒಂದು ದಿನ ಕಿಕ್ಕಾದ್ರೆ, ಇದ್ರಲ್ಲೇ ಕ್ಷಣ ಕ್ಷಣವೂ ಸಹ.
ಇಷ್ಟೆಲ್ಲಾ ಪ್ರೀತಿಗೆ ಶಕ್ತಿ ಇದ್ದರೂ ಸಹ, ಪ್ರೀತಿಸಿದವರೊಂದಿಗೆ ಮಾತ್ರ ಯಾಕೆ ನಮ್ಮ ನಮ್ಮ ಸಮಾಜ ಬಾಳಲು ಬಿಡುವಿದಿಲ್ಲ? ಹುಡುಗನಿಗೆ ಒಳ್ಳೇ ಕೆಲಸವಿಲ್ಲ, ಹುಡುಗಿಯನ್ನು ಸಾಕುವ ಶಕ್ತಿ ಇಲ್ಲ ಅಂದರೆ ಅದು ಒಪ್ಪುವಂತಹ ಮಾತು. ಆದರೆ ಗುಣ ಹಣಗಳ ಹಣೆಬರಹ ಸರಿಯಾಗಿದ್ದೂ ಸಹ ಈ ಮನಸ್ಸಿನ ವ್ಯಾಕುಲವೇಕೆ? ಯಾಕೆ ಅಂತ?
ಭಾರತೀಯ ಸಂಸ್ಕೃತಿ ಪ್ರಪಂಚದಲ್ಲಿಯೇ ಅತ್ಯುಚ್ಚವಾದುದು ಅಲ್ಲವೇ? ಇದನ್ನು ಯಾರು ಸಹ ಇಲ್ಲ ಎನ್ನಲಾರ್. ಯಾರೋ ಪಾಸ್ ಪೋರ್ಟ್ ಇಲ್ಲದ ಹೊರಗಿನವ ಇಲ್ಲೇ ಬಂದು ಅದೆಷ್ಟು ಜನರಿಗೂ ಯಾರೂ ಸಹ 'ಏನಪ್ಪಾ, ನೀ ಎಲ್ಲಿಯವ? ಎಷ್ಟು ದಿನ ಇರುವೆ' ಎಂದು ಸಹ ಕೇಳದ ನಾವು, ಕಸಬ್ ನಂಥ ದುಷ್ಟರಿಗೂ ಸಹ ಮೂರು ಹೊತ್ತು ನಮ್ಮ ದೇಶದ ಮಣ್ಣು ತಿಂದ ಕುರಿಗಳ ಮಟನ್ ಬಿರಿಯಾನಿಯ ಬಡಿಸುವ ನಾವು, ನಮ್ಮವರ ಪ್ರೀತಿಗೆ ಮಾತ್ರ ಯಾಕೆ ಮುಳ್ಳಿನಂತೆ ಅಡ್ಡ ನಿಂತುಬಿಡುತ್ತೇವೆ? ಭಾರತೀಯತೆಯನ್ನೇಕೆ ಸ್ಪಂದಿಸುವುದಿಲ್ಲ?
ಒಟ್ಟಿಗೆ ಊಟ,ಆಟ,ಪಾಠ ಆಡಿದವರನ್ನು ಸಹ ಪ್ರೀತಿ ಎಂದಾಗ ಅದೆಷ್ಟು ತಂದೆ ತಾಯಿ ಯಾಕೆ ನಂಬುವುದಿಲ್ಲ?
ಸಂಸ್ಕೃತಿ ನಮ್ಮ ನಡೆ ನುಡಿಯಲ್ಲಿರುವಂತಹುದು, ನಮ್ಮ ಹಾವ ಭಾವದಲ್ಲಿರುವಂತಹುದು. ಸಂವಿಧಾನದಲ್ಲಿ ಎಲ್ಲರೂ ಒಪ್ಪಿ ಮಸೂದೆಯನ್ನು ಅಂಗೀಕರಿಸುವಂತೆ ಪ್ರೀತಿಗೂ ಸಹ ಒಂದು ಮಸೂದೆ ಬೇಕೇ? ನಮ್ಮ ಮನಸ್ಸಿನ ಒಪ್ಪಿಗೆ ಸಾಕಾಗುವುದಿಲ್ಲವೇ?
ನಂಬಿಕೆಯೇ ದೇವರು.. ಅದರ ಮುಂದೆ ಎಲ್ಲವೂ ಸೊನ್ನೆ. ನಮ್ಮ ಸಮಾಜ ಪ್ರೀತಿಗೆ ಒಪ್ಪುವುದಿಲ್ಲ ಎಂದರೆ ಅದು ನಂಬಿಕೆಯ ಪ್ರಶ್ನೆಯೇ. ಪ್ರೀತಿಗೆ ಒಪ್ಪದ ಸಮಾಜ ಸ್ನೇಹ ಇದ್ದಾಗ ಯಾಕೆ ಪ್ರಶ್ನಿಸುವುದಿಲ್ಲ? ಇದನ್ನ ಯಾಕೆ ನಾವೂ ಸಹ ಪ್ರಶ್ನಿಸುವುದಿಲ್ಲ?
ಮರದಂತೆ ಬೆಳೆಯಲು ಬಿಟ್ಟು, ಆಮೇಲೆ ಕಡಿಯುವುದಕ್ಕಿಂತ, ಗಿಡವಾದಾಗಲೇ ಚಿವುಟುವುದು ಅದೆಷ್ಟೋ ವಾಸಿ ಅಲ್ವಾ?
ಇನ್ನಾದರೂ ನಮ್ಮ ತಂದೆ ತಾಯಿಯರು, ಸಂದರ್ಭಕ್ಕೆ ತಕ್ಕಂತೆ ನಿರ್ಧರಿಸುವರೆಂದು ನನ್ನ ನಂಬಿಕೆ! ಪ್ರೇಮಿಗಳನ್ನ ಆ ದೇವರೇ ಕಾಪಾಡಲಿ!
