ಅಂದು ಸೋಮವಾರ..
ಎಂದಿನಂತೆ ನೀಟ್ ಆಗಿ ಶೇವ್ ಮಾಡಿ ಶ್ರೀಧರ್ ಆಫೀಸ್ ಗೆ ಬಂದಿದ್ದ. ಮೂವತ್ತರ ಹರೆಯದ ಸಕ್ಕತ್ ಹ್ಯಾಂಡ್ಸಮ್ ಯುವಕ ಆತ. ಸುಂದರವಾದ ಹೆಂಡತಿ, ಮುದ್ದಾದ ಮಗು. ಒಟ್ಟಾಗಿ ಹೇಳೋದೇ ಆದ್ರೆ ಅವನದೊಂದು ಪರ್ಫೆಕ್ಟ್ ಫ್ಯಾಮಿಲಿ.
ಆಫೀಸ್ ಲೀ ಕೂತರೂ ಸಹ ಅದೆಂಥದೋ ಒಂದು ಹೇಳಲಾಗದ ಸಂಕಟ. ಈಗ ನಾವು ಬಸ್ ಸ್ಟ್ಯಾಂಡ್ ಲೀ ನಿಂತಾಗ, "ಛೇ, ಏನೋ ಮರೆತು ಬಿಟ್ನಲ್ಲ ಏನದು"? ಅಂತ ಯೋಚನೆ ಮಾಡ್ತೀವಲ್ವಾ? ಅದೇ ತರ.
ತನ್ನದೇ ಡೆಸ್ಕ್ನಲ್ಲಿದ್ದ ಕಂಪ್ಯೂಟರ್ ನ ಸ್ವಿಚ್ ಆನ್ ಮಾಡಿದಾತನೆ, ಎರಡು ನಿಮಿಷ ಕಣ್ಣು ಮುಚ್ಚಿ ಏನು ಮರೆತೇ ಎಂದು ಯೋಚಿಸುತ್ತಿದ್ದಾಗಲೇ ಒಂದು ಕ್ಷಣ ತಾನೇನು ಮಾಡಿದ್ದೇನೆಂದು ನೆನೆದು ಹೌಹಾರಿದ. ಕೂತ ಜಾಗದಲ್ಲೇ ಬೆವೆತುಹೋದ. ಮನೆಯಿಂದ ಹೊರಡುವಾಗ ಮಯ್ಯಿಗೆ ಪೂಸಿಕೊಂಡಿದ್ದ ಕಾಮಸೂತ್ರ ಡಿಯೋ ತನ್ನ ಕಂಪನ್ನು ಕಳೆದುಕೊಂಡಿತ್ತು!!
ಹಾಲ್ ನಲ್ಲಿ ಶೇವ್ ಮಾಡುತಿದ್ದ ಆತ, ಮರೆತು ಬ್ಲೇಡ್ ನ ಅಲ್ಲೇ ಬಿಟ್ಟುಬಂದಿದ್ದ. ಹೆಂಡತಿ ಅಡುಗೆ ಮನೆಯಲ್ಲಿದ್ದಳು, ಎರಡು ವರ್ಷದ ಮಗು ಅಲ್ಲೇ ಆಡುತ್ತಿತ್ತು. ಆ ಬ್ಲೇಡ್ ಅವನ ಅವತ್ತಿನ ಸಂತೋಷಕ್ಕೆ ಕತ್ತರಿ ಹಾಕಿತ್ತು..
ಫೋನ್ ತೆಗೆದವನೆ, ಹೆಂಡತಿಗೆ ಫೋನಾಯಿಸಿದ. ಕರೆಯನ್ನೂ ಹೆಂಡತಿ ಸ್ವೀಕರಿಸಲಿಲ್ಲ.. ಇನ್ನೆರಡು ಬಾರಿ ಕಾಲ್ ಮಾಡಿದ, ಉಹೂಂ!! ಉತ್ತರವಿಲ್ಲ. ಇನ್ನೂ ಮನಸ್ಸ ತಡೆಯಾದ ಆತ ಹೊರಗೆ ಓಡಿದವನೇ ಕಾರನ್ನೇರಿ ಶರವೇಗದಿ ಚಲಾಯಿಸಿದ. ಡ್ರೈವ್ ಮಾಡುವಾಗಲೆಲ್ಲಾ ಮಗು ಬ್ಲೇಡ್ ನಿಂದ ಮುಖ ಮೈಯನ್ನೆಲ್ಲ ಕೊಯ್ದುಕೊಂಡಂತೆ ಅವನಿಗೆ ಭಾಸವಾಗುತ್ತಿತ್ತು. ಕರುಳನ್ನು ಹಿಂಡಿದ ಅನುಭವ. 'ಛೇ, ನಾ ಎಷ್ಟು ಬೇಜವಾಬ್ದಾರಿಯ ಮನುಷ್ಯ" ಅಂತ ಅನಿಸತೊಡಗಿತ್ತು. ಮನೆ ತಲುಪುವದರಲ್ಲಾಗಲೇ ನಲ್ವತ್ತು ನಿಮಿಷವಾಗಿತ್ತು..
ಉಸಿರ ಬಿಗಿಹಿಡಿದು ಒಂದೇ ಸಮನೆ ತನ್ನ ಅಪಾರ್ಟ್‌ಮೆಂಟ್ ನ ಮೂರನೇ ಫ್ಲೋರ್ ಗೆ ಓಡಿದಾತನೆ ತನ್ನ ಫ್ಲಾಟ್ ಗೆ ಧಾವಿಸಿದ. ಬಾಗಿಲು ತೆರೆದೇ ಇಟ್ಟಿತ್ತು. ಹೆಂಡತಿ ಸ್ನಾನಕ್ಕೆ ಹೋಗಿದ್ದಳು.. ಹಾಲ್‌ನಲ್ಲ್ಲಿ ಮಗು ಖುಶಿಯಿಂದ ಆಟ ಆಡುತ್ತಿತ್ತು. ಬ್ಲೇಡ್ ಅವನು ಹಾಲ್ ನಲ್ಲಿ ಬಿಟ್ಟಿರಲಿಲ್ಲ. ಮನಸ್ಸಿಗೆ ಹಾಯ್ ಎನಿಸಿತು. ಸೆಖೆ ಎನಿಸಿ, ಫ್ಯಾನ್ ಆನ್ ಮಾಡಿದವನೇ "೫" ನೇ ಅಂಕಿಗೆ ತಿರುಗಿಸಿದ..
ಮಗುವನ್ನು ನೋಡಿದವನೆ, ಅಪ್ಪಿ ಮುದ್ದಾಡಿ "ಚಿನ್ನ, ಅದೆಷ್ಟು ಭಯವಾಗಿತ್ತು ನನಗೆ. ನೀ ನನ್ನ ಜೀವ" ಅಂತ ಖುಶಿಯಿಂದ ಎತ್ತಿ ಹಾರಿಸಿ ಹಿಡಿಯಲು ಹೋದ. ಕಾಕತಾಳೀಯ...
ಮಗುವಿನ ತಲೆ ವೇಗವಾಗಿ ತಿರುಗುತ್ತಿದ್ದ ಫ್ಯಾನ್ ರೆಕ್ಕೆಗೆ ಸಿಕ್ಕಿತ್ತು. ಮಗು ತನ್ನ ಜೀವವ ತಂದೆಯ ಮುಗ್ಧ ಪ್ರೀತಿಗೆ ತೆತ್ತಿತ್ತು..!!
ದೊಡ್ಡಪ್ಪನಿಂದ ಆ ನತದೃಷ್ಟ ತಂದೆ ಮಗುವಿನ ಕಥೆ ಕೇಳಿದ ನನ್ನ ಕಣ್ಣೂ ಹನಿಗೂಡಿತ್ತು!!