Sunday, August 21, 2011

ಭಾರತೀಯತೆಯ ಅದಮ್ಯತೆ... ಸ್ವಾತಂತ್ರ ಉದ್ಯಾನವನದಲ್ಲೊಂದು ಭಾನುವಾರ..



ಅಮ್ಮನ ಮುತ್ತು ಪಡೆದದ್ದಂತೂ ಇತಿಹಾಸ. ಬಹುಶಃ ನನ್ನ ಒಂದನೇ ಎರಡನೆ ತರಗತಿಯಲ್ಲಿರಬಹುದು. ಅಮ್ಮ ನನ್ನನ್ನು ಮುದ್ದಾಗಿ ಬೆಳಸುವುದಕ್ಕಿಂತಲೂ ಪ್ರಜ್ಞಾವಂತನನ್ನಾಗಿ ಬೆಳೆಸಿದರೆನ್ದರೂ ತಪ್ಪಾಗಲಾರದು..

ಇಂದು ಆ ಮುತ್ತಿನ ಅನುಭವ ಮತ್ತೊಮ್ಮೆ ಆಗಿದ್ದು ಕೇಸರಿ,ಬಿಳಿ,ಹಸಿರು ಕುಂಚ ಹಿಡಿದು ಕೆನ್ನೆ ಮೇಲೆ ರಂಗು ಬಳಿದ ಆ ಮಹಾತಾಯಿಂದಲೇ..!! ಅವಳಾರೊ ತಿಳಿಯದು.. ಸಿಕ್ಕದ್ದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ..!! ಸಂಬಂಧ ಬೆಸೆದದ್ದು ಇವತ್ತಿಂದ ಜನ ಆಂದೋಲನದಲ್ಲಿ ಲೊಕಪಾಲದ ಹೆಸರಿನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ರಂಗು ತುಂಬಿದ ಅದ್ಭುತ ನೇತಾರ ಅಣ್ಣಾ ಹಜಾರೆಗೆ ನನ್ನದೊಂದು ವಿನಮ್ರ ನಮನ..

ಚಿಣ್ಣರಿಂದ ವ್ರುದ್ಧರವರೆಗು ಪುಟಿದ ಉತ್ಸಾಹ.. "ವಂದೇ ಮಾತರಮ್".. "ಬೋಲೋ ಭಾರತ್ ಮಾತಾ ಕೀ ಜೈ" ಎಂಬ ರಾಷ್ಟ್ರೀಯ ರಜೆದಿನಗಳಿಗಷ್ಟೇ ಸೀಮಿತವಾಗಿದ್ದ ಘೋಷಣೆಗಳು ಇವತ್ತಿಗೆ ತಹಬದ್ದಿನ ರೂಪ ಪಡೆದವು..

ಕೆಲಸ ಬಿಟ್ಟು ಬಿಡುವನ್ನು ಪಡೆದಿದ್ದ ನನ್ನ ಮನಸಿನಲ್ಲಿ ಅದೆಂಥದೋ ಹೇಳಲಾಗದ ಒಂದು ತಪ್ಪಿತಸ್ಥ ಭಾವನೆ.. ವಾರ್ತಾ ಪ್ರಸಾರದಲ್ಲಿ ನಿರಂತರವಾಗಿ ನೋಡುತ್ತಿದ್ದ ಯುವ ಜನತೆಯ ಅಣ್ಣ ನಿಮ್ಮ ಹಿಂದೆ ನಾವಿದ್ದೇವೆ ಎಂದಾಗಲೆಲ್ಲ.. ನಾನಿಲ್ಲವೇ ಎಂಬ ವ್ಯಸನ.. ಸುಮ್ಮನಿದ್ದ ನಾನು ಎಲ್ಲದಕ್ಕೂ ರೆಡೀ ಇರೋ ಗೆಳೆಯ ದೀಪುವಿಗೇ ಕೇಳಿದಾಗ.. "ಯಾಕಿಲ್ಲ, ಪಬ್ ಕ್ಲಬ್ ಮಾತ್ರ ಗೆಳೆಥನಕ್ಕೆ ಮೀಸಲಲ್ಲ, ದೇಶವೂ ಕೂಡ.. ಮಂತ್ರಿಗಳ ಹುಟ್ಟಡಗಿಸೋಣ" ಎಂದಾಗ ಎಲ್ಲಿಲ್ಲದ ಉತ್ಸಾಹ.

ದಾರಿ ದಾರಿಯಲ್ಲೂ ಜನರ ಸಾಲು.. ನನಗೋ ನಡುವಲ್ಲಿ ಹೋಗಿ ಸೇರಲು ಮುಜುಗಾರ.. ಅಂತೂ ಇಂತು ಉದ್ಯಾನದವರೆಗೂ ಯಾವುದೋ ಒಂದು ಗುಂಪಿನ ಹಿಂದೆಯೇ ಹೋಗಿ ಜನರನ್ನು ಸೇರುತ್ತಲೇ ಆದ ಅನುಭವ ವರ್ಣಿಸಲಾಗದ್ದು.. ಅದನ್ನು ಅನುಭವಿಸಿದಾತನೆ ಬಲ್ಲ.. ರೋಮಗಳು ಸೆಟೆದು ನಿಂತು ಮೈ ಜುಂ ಎಂದಾಗಲಂತೂ ಕಣ್ಣನ್ನು ಮುಚ್ಚಿ ಭಾರತೀಯತೆಯನ್ನೊಮ್ಮೆ ಸಂಪ್ಪೊರ್ನವಾಗಿ ಅನುಭವಿಸಿದ ತನ್ಮಯತೆ.. ಎಷ್ಟು ಜನರು ದಿನವಿಡೀ ಮನೆಯಲ್ಲಿ ಕುಳಿಥು ಐಶಾರಾಮಿಯಾಗಿ ಟಿವಿ ನೋಡಿದರೋ ನಾ ಅರಿಯೆ.. ಆದರೆ, ಮನೆಯಲ್ಲಿದ್ದು ಒಂದು ಅದ್ಭುತ ಅನುಭವವನ್ನಂತೂ ಖಂಡಿತ ಕಳೆದುಕೊಂಡಾರು..
ಬನ್ನಿ ಯುವಕರೇ.. ಇನ್ನಾದರೂ ನಮ್ಮ ದೇಶವ ಕಟ್ಟುವ..

ಇಷ್ಟನ್ನು ಬರೆಯದೇ ಊಟ ಸಹ ಮಾಡಬಾರದೆಂದು ನನಗೆ ನಾನು ಶಪಥ ಮಾಡಿಕೊಂಡದ್ದಕ್ಕೆ ಹೆಮ್ಮೆಯೆನಿಸುತ್ತಿದ್ದೆ..

ಓದಿ ನಿಮ್ಮ ಅನುಭವ ಹಂಚಿಕೊಂಡರೆ, ನನ್ನಷ್ಟು ಸಂತೋಷಿಸುವವ ಇನ್ನೊಬ್ಬನಿಲ್ಲ..

ಇಂತೀ ನಿಮ್ಮ..
ರಕ್ಷಿತ..

Saturday, August 20, 2011

ಎಲ್ಲಿಗೆ ಹೊರಟಿರಿ??!?!?!?!?


ಎಲ್ಲಿಗೆ ಹೊರಟಿರಿ??!?!?!?!?








ಅಂದು ಶುಕ್ರವಾರ.. ನಾ ಶಿವಮ್ಮೊಗ್ಗೆಯಲ್ಲಿ ಕಾಲೇಜ್ ಕಲಿಯುತ್ತಿದ್ದ ಸಮಯ.. ಸರಿ ಸುಮಾರು ಜನವರಿ ತಿಂಗಳು.

ಶಿವಮೊಗ್ಗೆಯಲ್ಲಿ ಜನೆವರಿ ತಿಂಗಳು ಅಂದ್ರೆ ಅಡಿಕೆ ಮಾರಾಟದ ಅಬ್ಬರವೇ ಜೋರು.. ಮಲೆನಾಡಿಗರೆಲ್ಲರೂ ಬಾರಿ ಕೈಲಿ ಬಂದು ಜೀಬು ತುಂಬಾ ದುಡ್ಡು ಅದೇ ಜೇಬಿಗೆ ತುರುಕಿಕೊಂಡು ಹೋಗುವ ದಿನಗಳು...
ಇಂಥ  ಸಮಯದಲ್ಲಿಯೇ ಅಪ್ಪ ಊರಿಂದ ಬಂದು ಅಲ್ಪ ಸ್ವಲ್ಪ ಅಡಿಕೆ ಮಾರಿ ಕಯ್ಯಲ್ಲಿದ್ದದ್ದರಲ್ಲೇ ತಿಂಗಳ ಖರ್ಚಿಗೆ ನನಗೂ ಸ್ವಲ್ಪ ಕೊಟ್ಟು.. "ಅಯೋಧ್ಯಾ" ಹೊಟೇಲಿನಲ್ಲಿ ಒಂದು ಬಿಸಿ ಬಿಸಿ ಮಸಾಲೆ ದೋಸೆ ತಿನ್ನಿಸಿ.. ಚಾ ಕೊಡಿಸಿ.. "ಬಾರೋ .. ಬಸ್ ಸ್ಟ್ಯಾಂಡ್ ತನಕ ನಂಗೆ ಒಬ್ಬನಿಗೆ ಹೋಗೋಕೆ ಬೇಜಾರು" ಎಂದಾಗ.. "ಸರಿ ನಡೀರಿ" ಅಂಥ ನಾನು ಹೊರಟೆ.



ನಮ್ಮನೆ ಆಗುಂಬೆಗೆ ಹತ್ತಿರ,ಸರಿಸುಮಾರು ಹತ್ತು ಮೈಲಿಯಿರಬಹುದು. ಆದುದರಿಂದ ನಮ್ಮನೆಗೆ ಹೋಗಬೇಕಂದ್ರೆ ತೀರ್ಥಹಳ್ಳಿ ಬಸ್ ಹಿಡಿದು ಅಲ್ಲಿಂದ ನಮ್ಮೂರ್ಗೆ ಇನ್ನೋನು ಬಸ್ ಹಿಡಿಯೋ ಪರಿಸ್ಥಿತಿ..
ಶಿವಮೊಗ್ಗದ ತೀರ್ಥಹಳ್ಳಿ ಕಡೆ ಹೋಗೋ ಬಸ್‌ಗಳು ಯಾವಾಗಲು ಭರ್ತಿ ಭರ್ತಿ.. ಜೊತೆಗೆ ಯಾವುದೇ ಸರಕಾರಿ ಬಸ್ಗಳ ಸಂಪರ್ಕವಿದ್ದಿಲ್ಲ.. ಈಗಲೂ ..

ಈ ಖಾಸಗೀ ಬಸ್‌ಗಳು ತಮ್ಮದೇ ಆದ ರೀತಿಯಲ್ಲಿ ಜನರನ್ನ ಕಿರೀ ಕಿರೀ ಮಾಡೋ ಜಾಯಮಾನದವರು.. ಒಂದೇ ಸಮಯಕ್ಕೆ ಎರಡೆರಡು ಬಸ್‌ಗಳು ತೀರ್ಥಹಳ್ಳಿಗೆ ಹೊರಡುತಿದುದರಿಂದ ತಮ್ಮ ಬಸ್ಸಿಗೆ ಹೇಗಾದರೂ ಮಾಡಿ ಎಲ್ಲರನ್ನೂ ತುಂಬಬೇಕೆಂಬ ದುರಾಸೆ..

ಸರಿ.. ಇಷ್ಟೆಲ್ಲಾ ಕಥೆ ಯಾಕೆ ಇವ ಹೇಳಿದ ಅಂತ ನಿಮಗೀಗ ರಗಳೆ ಆಗ್ತಾ ಇರಬಹುದು. ಇರಲಿ,ಈಗ ಕೇಳಿ..

ನಾನು ಅಪ್ಪನ ಜೊತೆ ಬಸ್ ಸ್ಟ್ಯಾಂಡ್ ಗೆ ಹೋದೆ.ಅವರಿಗೆ ಹೋಗುಕೆ ಮುಂಚೆಯೇ ಅಭೂತಪೂರ್ವ ಶುಭಾಶಯದೊಂದಿಗೆ ಒಂದು ಬಸ್ಸಿನೊಳಗೆ ಸಕಲ ಮರ್ಯಾದೆಯೊಂದಿಗೆ ಸೀಟೂ ಸಹ ಸಿಕ್ಕಾಯಿತು.. ಇದಾದ ಮೇಲೆ ನಂದೇನು ಕೆಲ್ಸಾ..  ನಾನು ಅಪ್ಪನಿಗೆ ಟಾ ಟಾ ಮಾಡಿ ವಾಪಸ್ ಹೋಗೋಕೂ ಹಾಗೆಯೇ ಜಲಬಾಧೆ ತೀರಿಸಿ ಹೋಗುವ ಅಂತ ಅಲ್ಲೇ ಬಸ್ ಸ್ಟ್ಯಾಂಡ್ ಟಾಯ್ಲೆಟ್ ಕಡೆ ಹೊರಟೆ..

ತಗೊಳ್ಳಿ ಸ್ವಾಮಿ.. ಬಂದೆ ಬಿಟ್ಟ ಒಬ್ಬ.. "ಬನ್ನಿ ಸಾರ್ ನಮ್ ಬಸ್ಸಿಗೆ, ಪೂರ್ತಿ ಸೀಟು ಖಾಲಿ ಇವೆ.ಆರಮಾಗಿ ಮಲ್ಕೊಂಡೆ ಹೋಗ್ಬಹುದು.." ನಾ ಹೇಳಿದೆ.. "ನೋಡಪ್ಪ.. ನಾ ಎಲ್ಲ್ಲಿಗೂ ಹೋಗ್ತಾ ಇಲ್ಲ.. ಸುಮ್ನೇ ಹೋಗು.."

ಅಷ್ಟಕ್ಕೇ ಪ್ರಾಣಿ ಪ್ರಯತ್ನ ಬಿಡಲಿಲ್ಲ.. ಇವತ್ತು ಏನಾದ್ರೂ ಮಾಡಿ ಒಂದು ಸೀಟು ಪಡೆದೇ ತೀರ್ತೀನಿ ಅನ್ನೋ ನಂ ಎಡಿಯೂರಪ್ಪ ಥರ, "ಇಲ್ಲ ಸಾರ್ ಬೇಕಾದ್ರೆ ನೀವೇ ಬಂದು ನೋಡಿ.. ಸೀಟು ಖಾಲಿ ಇವೆ ಅಂತ ಮತ್ತೆ ಅಂದ.."

ನಂಗೆ ನಿಧಾನವಾಗಿ ಕೋಪ ಬರೋಕೆ ಆಗ್ಲೇ ಶುರು ಆಗಿತ್ತು..

ಇನ್ನೊಮ್ಮೆ ಹೇಳಿದೆ: "ನಾ ಶಿಮೊಗದಲ್ಲೇ ಇರೋದು, ಎಲ್ಲೂ ಬರಲ್ಲ ಹೋಗು".

ಮತ್ತದೇ ರಾಗ ಅವನದು, "ಅರೆ.. ಬನ್ನಿ ಸಾರ್ ನೀವು, ಪೂರ್ತಿ ಖಾಲಿ ಇದೆ.." ಅಂತ ನನ್ನ ಕಯ್ಯಿ ಹಿಡಿದು ಎಳೆದೆ ಬಿಟ್ಟ..

ನಾನೆಂದೆ.. " ನಾ ಹೋಗೋ ಕಡೆ ಬಂದು ನಂಗೊಂಡು ಸೀಟ್ ಮಾಡಿ ಕೊಡ್ತಿಯಾ ಅಂತ ಕೇಳಿದೆ"

ಅವನು - "ಯಾಕಿಲ್ಲ ಸಾರ್.. ಎಲ್ಲಿಗೆ ಹೊರಟ್ರಿ ಹೇಳಿ ಸಾರ್"?

ನಾನು: ಹೌದಾ? ಸರಿ..  "ಟಾಯ್ಲೆಟ್"... ನಿಮ್ ಬಸ್ ಹೋಗುತ್ತಾ?!!!! :p :p

ಅವನು: "?????!???!?!!??****???"