ಹಿಮಾಲಯದ ಸಮೀಪದ ಒಂದು ಹಳ್ಳಿ. ಅದು ಕಡು ಚಳಿಗಾಲದ ಒಂದು ಸಂಜೆ.. ಹಿಮಾಲಯದ ಸೌಂದರ್ಯ ನೋಡಬಯಸಿದ ವಿದೇಶಿ ನಡುವಯಸಿನ ಮಹಿಳೆಯೊಬ್ಬಳ ಲಕ್ಸುರಿ ಕಾರು ಪಂಖ್ಚರ್ ಆಗಿ ನಿಂತಿತ್ತು.
ಸಹಾಯಕ್ಕಾಗಿ ಕೈ ಚಾಚಿ ಮೈ ಕೊರೆವ ಚಳಿಯಲ್ಲಿ ದಾರಿಹೋಕನೊಬ್ಬನಿಗೆ ಕಾದು ನಿಂತಿದ್ದಾಳೆ ಯಾರು ಬರುತ್ತಿಲ್ಲ. ಸೂರ್ಯ ಬೇರೆ ಮುಳುಗಿ ಪಡುವಣದಿ ಮಂಜು ಆವರಿಸಿ ಕತ್ತಲು ಚಳಿಯು ಸೀರಿ ರೌದ್ರ ನರ್ತನ ಮಾಡುತ್ತಿವೆ. ಅವಳ ಪರಿಚಯಸ್ತರಿಗೆ ಕರೆ ಮಾಡಬೇಕೆಂದರೂ ಆ ಕಡು ಕುಗ್ರಾಮದಿ ಸಂಪರ್ಕಕ್ಕೆ ದಾರಿಯೇ ಇಲ್ಲ. ಮುದುಡಿದ ಮುಖ ಹೊತ್ತು ಕಾಯುತ್ತಿರುವ ಹೊತ್ತಿಗೆ ದೂರದಲ್ಲಿ ದಪ್ಪ ಕಂಬಳಿಯ ಉಡುಗೆಯ ಹೊದ್ದ ಮಧ್ಯವಯಸ್ಕನೊಬ್ಬ ಇತ್ತ ಬರುತ್ತಿರುವುದು ಕಂಡಿತು. ಸಹಾಯಕ್ಕಾಗಿ ಕೂಗಿದವಳೇ ಸನ್ನೆಯ ಮೂಲಕ ತನ್ನ ಕಾರು ಕೆಟ್ಟು ನಿಂತಿದೆ ಎಂದಷ್ಟೇ ಹೇಳಿದಳು. ಆತನ ಹೆಸರು 'ಕುಂ ಚುಕ್'. ಕುಗ್ರಾಮವಾದರೂ ತಕ್ಕ ಮಟ್ಟಿಗೆ ಇಂತಹ ಸನ್ನಿವೇಶದಲ್ಲಿ ಪಳಗಿದ್ದ ಕುಂ ಚುಕ್ ತಕ್ಕ ಮಟ್ಟಿಗೆ ಇಂಗ್ಲೀಷ್ ಬಲ್ಲವನಾಗಿದ್ದ. ಮೇಡಂ ಜೀ, ನೀವು ಸರಿ ಎಂದರೆ ಕಾರನ್ನು ನಾ ಸರಿ ಮಾಡಬಲ್ಲೆ. ನಿಮಗೆ ಈ ಚಳಿ ತಡೆಯಲ್ಲಾಗದು. ಅಮ್ಮಾ, ನೀವು ಕಾರಿನಲ್ಲಿ ಕುಳ್ಳಿರಿ" ಎಂದೂ ಅವಳಿಗೆ ಧೈರ್ಯ ಹೇಳಿ, ಕಾರಿನ ಟೈರ್‌ನ್ನು ಸ್ವಲ್ಪ ಹೊತ್ತಿನಲ್ಲಿಯೇ ಬದಲಿಸಿ ಕೊಟ್ಟ. ನೋಡಲು ಕುಂ ಚುಕ್ ಮಧ್ಯ ವಯಸ್ಕನಾದರೂ ಆತನ ಕಂಗಳಲ್ಲಿ ಅದೇನೋ ಅದಮ್ಯ ಕಾಂತಿ, ಬಣ್ಣಿಸಲಾಗದ ದಯೆ ತುಂಬಿ ಬರುವಂತಿದ್ದ್ಡವು. ಉಡುಗೆಯಲ್ಲಿ ಬಡತನವೂ ತುಂಬಿತ್ತು. ವಿದೇಶಿ ಮಹಿಳೆ ಕೊಂಚವೂ ಯೋಚಿಸದೇ ೫೦೦ ರ ಇಪ್ಪತ್ತು ನೋಟುಗಳ ಕಂತೆಯೊಂದನು 'ಇಗೋ, ನಿನ್ನ ಸಹಾಯವ ಎಂದಿಗೂ ಮರೆಯಲಾರೆ. ನಿನ್ನನು ಸದಾ ನೆನೆಯುವೆ." ಎಂದಳು.
ಕುಂ ಚುಕ್ ಸ್ವಾಭಿಮಾನಿ, ಕೊಟ್ಟ ಹಣವನ್ನು ಅವರಿಗೆ ತಿರುಗಿ ನೀಡಿ, "ಇದು ನಮ್ಮ ಭಾರತೀಯ ಸಂಪ್ರದಾಯ. ಸಹಾಯ ಮನದ ಮೂಲೆಯಿಂದ ಮಾಡಿದಾಗ ಹಣ ಪಡೆಯಲಾರೆವು. ನಾ ನಿಮಗೆ ಸಹಾಯ ಮಾಡಿದಂತೆ, ಕಷ್ಟದಲ್ಲಿರುವ ಇನ್ನೊಬ್ಬರಿಗೆ ನೀವು ಸಹಾಯ ಮಾಡಿರಿ. ಆದರೆ ನೆನಪಿಡಿ, ನಿಮ್ಮ ಮನಸ್ಸು ನಿಮಗೆ ಸಹಾಯ ಮಾಡು ಅಂತ ತೋರಿದಲ್ಲಿ ಮಾತ್ರ ಸಹಾಯ ಮಾಡಿರಿ. ಹಾಗೆ ಮಾಡುವಾಗ ನನ್ನನು ನೆನೆದರೆ ಅಷ್ಟೇ ಸಾಕು. ನನಗೆ ಈ ಹಣ ವಾಪಸು ನೀಡಿದಂತೆ ಎಂದು ಹೇಳಿ ಸರ ಸರ ನಡೆದುಬಿಟ್ಟನು'. ಮಹಿಳೆಯ ಕಂಗಳಲ್ಲಿ ನೀರು ತುಂಬಿತ್ತು.

ಹೊತ್ತಾಯಿತೆಂದು ಕಾರು ಚಾಲಿಸಿ, ಒಂದೈದು ಕಿಲೋಮೀಟರ್ ಮುಂದೆ ಹೋದ ಬಳಿಕ ಹೊಟ್ಟೆ ಹೊಟ್ಟೆ ಹಸಿದಂತಾಗಿ, ಹತ್ತಿರದ ಚಿಕ್ಕ ಜೊಪಒದಿಯಂತಹ ಹೊಟೆಲ್ ಎದುರಿಗೆ ಕಾರ ನಿಲ್ಲಿಸಿದ ಮಹಿಳೆ, ಜೋಪಡಿಯ ಒಳಹೊಕ್ಕು ಯಾರಾದರೂ ಇದ್ದಾರೆಯೇ ಎಂದು ಕರೆದಳು. ಕರೆ ಕೇಳಿ ಹೊರ ಬಂದಳು ೮ ತಿಂಗಳು ತುಂಬಿದ ಬಸುರಿ. ವಿದೇಶಿ ಮಹಿಳೆ 'ಇಲ್ಲಿ ಊಟ ಸಿಗುವುದೇ ಎಂದು ವಿಚಾರಿಸಲು', ಐದು ನಿಮಿಷದಲ್ಲಿ ಅವಳಿಗೊಪ್ಪುವಂಥ ಚಪಾತಿಯ ಒಳಗೆ ಬೇಯಿಸಿದ ಆಲೋ,ಮೆಣಸು,ಈರುಳ್ಳಿ ಬೆಳ್ಳುಳ್ಳಿಯ ಹದವಾದ ಮಿಶ್ರಣದ ನಾಲ್ಕು ರೋಲ್‌ಗಳನ್ನು ಸಿಹಿ ಚಟ್ನಿಯೊಂದಿಗೆ ನಿಧಾನವಾಗಿ ನಡೆಯುತ್ತಾ ತಂದಿತ್ತಳು. ರೋಲ್ ಗಳ ಅದಮ್ಯ ರುಚಿಗೆ ಮನ ಸೋತ ಮಹಿಳೆ ಮನೆಯ ಪರಿಸ್ಥಿತಿಯನ್ನು ಗಮನಿಸಿ, 'ಅಯ್ಯೋ, ಇಂಥ ಸುಂದರ ಮಹಿಳೆಗೆ ಯಾಕಿಂತಹ ಸ್ಥಿತಿ. ಆ ದೇವರು ಯಾಕೆ ಹೀಗೆ ಎಂದು' ನೆನೆಯುತ್ತಾ ಅವಳು ನೀಡಿದ ಬಿಲ್ ಚೀಟಿಯ ಕೆಳಗೆ ಅದೇ ೫೦೦ ರ ಇಪ್ಪತ್ತು ನೋಟುಗಳಾನಿತ್ತು 'ಕುಂ ಚುಕ್, ನಿನ್ನ ಮಾತಿನಂತೆ ನನ್ನ ಮನಸಾರೇ ಈ ಹಣವನು ಇವಳಿಗೆ ನೀಡುವೇ ಎಂದು ಮನದಲ್ಲೇ ಅಂದುಕೊಂಡು ಬಿಲ್ ಚೀಟಿಯ ಕೆಳಗೆ ಬೇಗ ಬೇಗನೆ ನಾಲ್ಕು ಸಾಲುಗಳನು ಬರೆದು, ಕಾರನ್ನೇರಿ ಹೊರಟೆಹೋದಳು.
ಒಳಗಿಂದ ಧಾವಿಸಿದ ತುಂಬಿದ ಬಸುರಿ ಚೀಟಿಯ ಕೆಳಗೆ ಇದ್ದ ಗರಿ ಗರಿ ನೋಟುಗಳ ನೋಡಿ ಧಿಗ್ಬ್ರಾಂತಿಯಿಂದ 'ಏನಿದು,ಇಷ್ಟೊಂದು ಹಣ? ಯಾಕೆ? ಹೇಗೆ ಅವಳಿಗೆ ಇದನ್ನು ವಾಪಸ್ಸು ನೀಡಲಿ ಎಂದು ಬಿಲ್ ಚೀಟಿ ತಿರುಗಿಸೆ ನೋಡಲು ಹೀಗೆ ಬರೆದಿರುತ್ತದೆ.
"ಪ್ರಿಯ ಮಿತ್ರೆ, ನೀ ನೀಡಿದ ಊಟದ ಸವಿ ನನಗೆ ಇನ್ನೆಲ್ಲೂ ದಕ್ಕಿಲ್ಲ. ಮನಸ್ಸಿಗೆ ಯಾಕೋ ನೀನು ಕಷ್ಟದಲ್ಲಿರುವೆ, ಸಹಾಯ ಮಾಡಲೇಬೇಕೆಂದು ಈ ಹಣವನ್ನಿಟ್ಟಿದ್ದೇನೆ. ಇದನ್ನು ಸದುಪಯೋಗ ಮಾಡಿಕೊ, ನಿನಗೇನಾದರೂ ಇದನ್‌ನ್ನು ವಾಪಸ್ಸು ಮಾಡಬೇಕೆಂದಿದ್ದಲ್ಲಿ ದಯವಿಟ್ಟು ಅವಶ್ಯರಿಗೆ ಕಷ್ಟದಲ್ಲಿದಾಗ ನೀಡು. ಇದು ನಾ ಭಾರತೀಯನೊಬ್ಬನಿಂದ ಕಲಿತ ಸಂಸ್ಕೃತಿ ಎಂದಷ್ಟೇ ಬರೆದಿರುತ್ತದೆ".
ಕನ್ಣಾಳಿಯಲ್ಲಿ ನೀರು ತುಂಬಿ ಬಂದು.. ಸ್ವೆಟರ್ ನ ಮೂಲೆಯಿಂದಲೇ ಅರಿಯದಂತೆ ಒರೆಸಿಕೊಂಡು ಮನೆಗೆ ಗಂಡ ಬರಲೆಂದು ಕಾಯುತ್ತಿರುವಾಗಲೇ ಅವಳ ಗಂಡ ಬರುತ್ತಾನೆ. ಬಾಗಿಲಲ್ಲೇ ಆತನನ್ನು ತಬ್ಬಿ ಎದೆಗೆ ಮುತ್ತನಿತ್ತು, "ನನ್ನ ಹೆರಿಗೆಗೆಂದು ನೀ ಇನ್ನು ಕಷ್ಟ ಪಡಬೇಕಿಲ್ಲ. ಇಲ್ಲಿ ನೋಡು ಯಾರೋ ವಿದೇಶಿ ತಾಯಿ ನೀಡಿದ ಈ ಹಣ. ಇದೋ ಈ ಚೀಟಿ ಓದು" ಎಂದಾಗಲೇ ಸರ ಸರ ನೇ ಚೀಟಿ ಓದಿದ ಗಂಡ ನ ಕಣ್ಣಲೂ ಆನಂದ ಬಾಷ್ಪ. ಆತ ಬೇರೆ ಯಾರು ಅಲ್ಲಾರೀ, 'ನಮ್ಮ ಕುಂ ಚುಕ್'.
- ಎಲ್ಲೋ ಓದಿದ್ದು, ಇಂಗ್ಲೀಷ್ ನಿಂದ ಅನುವಾದಿಸಿದ್ದು.
.