ಎಲ್ಲಿಗೆ ಹೊರಟಿರಿ??!?!?!?!?
ಅಂದು ಶುಕ್ರವಾರ.. ನಾ ಶಿವಮ್ಮೊಗ್ಗೆಯಲ್ಲಿ ಕಾಲೇಜ್ ಕಲಿಯುತ್ತಿದ್ದ ಸಮಯ.. ಸರಿ ಸುಮಾರು ಜನವರಿ ತಿಂಗಳು.
ಶಿವಮೊಗ್ಗೆಯಲ್ಲಿ ಜನೆವರಿ ತಿಂಗಳು ಅಂದ್ರೆ ಅಡಿಕೆ ಮಾರಾಟದ ಅಬ್ಬರವೇ ಜೋರು.. ಮಲೆನಾಡಿಗರೆಲ್ಲರೂ ಬಾರಿ ಕೈಲಿ ಬಂದು ಜೀಬು ತುಂಬಾ ದುಡ್ಡು ಅದೇ ಜೇಬಿಗೆ ತುರುಕಿಕೊಂಡು ಹೋಗುವ ದಿನಗಳು...
ಇಂಥ ಸಮಯದಲ್ಲಿಯೇ ಅಪ್ಪ ಊರಿಂದ ಬಂದು ಅಲ್ಪ ಸ್ವಲ್ಪ ಅಡಿಕೆ ಮಾರಿ ಕಯ್ಯಲ್ಲಿದ್ದದ್ದರಲ್ಲೇ ತಿಂಗಳ ಖರ್ಚಿಗೆ ನನಗೂ ಸ್ವಲ್ಪ ಕೊಟ್ಟು.. "ಅಯೋಧ್ಯಾ" ಹೊಟೇಲಿನಲ್ಲಿ ಒಂದು ಬಿಸಿ ಬಿಸಿ ಮಸಾಲೆ ದೋಸೆ ತಿನ್ನಿಸಿ.. ಚಾ ಕೊಡಿಸಿ.. "ಬಾರೋ .. ಬಸ್ ಸ್ಟ್ಯಾಂಡ್ ತನಕ ನಂಗೆ ಒಬ್ಬನಿಗೆ ಹೋಗೋಕೆ ಬೇಜಾರು" ಎಂದಾಗ.. "ಸರಿ ನಡೀರಿ" ಅಂಥ ನಾನು ಹೊರಟೆ.
ನಮ್ಮನೆ ಆಗುಂಬೆಗೆ ಹತ್ತಿರ,ಸರಿಸುಮಾರು ಹತ್ತು ಮೈಲಿಯಿರಬಹುದು. ಆದುದರಿಂದ ನಮ್ಮನೆಗೆ ಹೋಗಬೇಕಂದ್ರೆ ತೀರ್ಥಹಳ್ಳಿ ಬಸ್ ಹಿಡಿದು ಅಲ್ಲಿಂದ ನಮ್ಮೂರ್ಗೆ ಇನ್ನೋನು ಬಸ್ ಹಿಡಿಯೋ ಪರಿಸ್ಥಿತಿ..
ಶಿವಮೊಗ್ಗದ ತೀರ್ಥಹಳ್ಳಿ ಕಡೆ ಹೋಗೋ ಬಸ್‌ಗಳು ಯಾವಾಗಲು ಭರ್ತಿ ಭರ್ತಿ.. ಜೊತೆಗೆ ಯಾವುದೇ ಸರಕಾರಿ ಬಸ್ಗಳ ಸಂಪರ್ಕವಿದ್ದಿಲ್ಲ.. ಈಗಲೂ ..
ಈ ಖಾಸಗೀ ಬಸ್‌ಗಳು ತಮ್ಮದೇ ಆದ ರೀತಿಯಲ್ಲಿ ಜನರನ್ನ ಕಿರೀ ಕಿರೀ ಮಾಡೋ ಜಾಯಮಾನದವರು.. ಒಂದೇ ಸಮಯಕ್ಕೆ ಎರಡೆರಡು ಬಸ್‌ಗಳು ತೀರ್ಥಹಳ್ಳಿಗೆ ಹೊರಡುತಿದುದರಿಂದ ತಮ್ಮ ಬಸ್ಸಿಗೆ ಹೇಗಾದರೂ ಮಾಡಿ ಎಲ್ಲರನ್ನೂ ತುಂಬಬೇಕೆಂಬ ದುರಾಸೆ..
ಸರಿ.. ಇಷ್ಟೆಲ್ಲಾ ಕಥೆ ಯಾಕೆ ಇವ ಹೇಳಿದ ಅಂತ ನಿಮಗೀಗ ರಗಳೆ ಆಗ್ತಾ ಇರಬಹುದು. ಇರಲಿ,ಈಗ ಕೇಳಿ..
ನಾನು ಅಪ್ಪನ ಜೊತೆ ಬಸ್ ಸ್ಟ್ಯಾಂಡ್ ಗೆ ಹೋದೆ.ಅವರಿಗೆ ಹೋಗುಕೆ ಮುಂಚೆಯೇ ಅಭೂತಪೂರ್ವ ಶುಭಾಶಯದೊಂದಿಗೆ ಒಂದು ಬಸ್ಸಿನೊಳಗೆ ಸಕಲ ಮರ್ಯಾದೆಯೊಂದಿಗೆ ಸೀಟೂ ಸಹ ಸಿಕ್ಕಾಯಿತು.. ಇದಾದ ಮೇಲೆ ನಂದೇನು ಕೆಲ್ಸಾ.. ನಾನು ಅಪ್ಪನಿಗೆ ಟಾ ಟಾ ಮಾಡಿ ವಾಪಸ್ ಹೋಗೋಕೂ ಹಾಗೆಯೇ ಜಲಬಾಧೆ ತೀರಿಸಿ ಹೋಗುವ ಅಂತ ಅಲ್ಲೇ ಬಸ್ ಸ್ಟ್ಯಾಂಡ್ ಟಾಯ್ಲೆಟ್ ಕಡೆ ಹೊರಟೆ..
ತಗೊಳ್ಳಿ ಸ್ವಾಮಿ.. ಬಂದೆ ಬಿಟ್ಟ ಒಬ್ಬ.. "ಬನ್ನಿ ಸಾರ್ ನಮ್ ಬಸ್ಸಿಗೆ, ಪೂರ್ತಿ ಸೀಟು ಖಾಲಿ ಇವೆ.ಆರಮಾಗಿ ಮಲ್ಕೊಂಡೆ ಹೋಗ್ಬಹುದು.." ನಾ ಹೇಳಿದೆ.. "ನೋಡಪ್ಪ.. ನಾ ಎಲ್ಲ್ಲಿಗೂ ಹೋಗ್ತಾ ಇಲ್ಲ.. ಸುಮ್ನೇ ಹೋಗು.."
ಅಷ್ಟಕ್ಕೇ ಪ್ರಾಣಿ ಪ್ರಯತ್ನ ಬಿಡಲಿಲ್ಲ.. ಇವತ್ತು ಏನಾದ್ರೂ ಮಾಡಿ ಒಂದು ಸೀಟು ಪಡೆದೇ ತೀರ್ತೀನಿ ಅನ್ನೋ ನಂ ಎಡಿಯೂರಪ್ಪ ಥರ, "ಇಲ್ಲ ಸಾರ್ ಬೇಕಾದ್ರೆ ನೀವೇ ಬಂದು ನೋಡಿ.. ಸೀಟು ಖಾಲಿ ಇವೆ ಅಂತ ಮತ್ತೆ ಅಂದ.."
ನಂಗೆ ನಿಧಾನವಾಗಿ ಕೋಪ ಬರೋಕೆ ಆಗ್ಲೇ ಶುರು ಆಗಿತ್ತು..
ಇನ್ನೊಮ್ಮೆ ಹೇಳಿದೆ: "ನಾ ಶಿಮೊಗದಲ್ಲೇ ಇರೋದು, ಎಲ್ಲೂ ಬರಲ್ಲ ಹೋಗು".
ಮತ್ತದೇ ರಾಗ ಅವನದು, "ಅರೆ.. ಬನ್ನಿ ಸಾರ್ ನೀವು, ಪೂರ್ತಿ ಖಾಲಿ ಇದೆ.." ಅಂತ ನನ್ನ ಕಯ್ಯಿ ಹಿಡಿದು ಎಳೆದೆ ಬಿಟ್ಟ..
ನಾನೆಂದೆ.. " ನಾ ಹೋಗೋ ಕಡೆ ಬಂದು ನಂಗೊಂಡು ಸೀಟ್ ಮಾಡಿ ಕೊಡ್ತಿಯಾ ಅಂತ ಕೇಳಿದೆ"
ಅವನು - "ಯಾಕಿಲ್ಲ ಸಾರ್.. ಎಲ್ಲಿಗೆ ಹೊರಟ್ರಿ ಹೇಳಿ ಸಾರ್"?
ನಾನು: ಹೌದಾ? ಸರಿ.. "ಟಾಯ್ಲೆಟ್"... ನಿಮ್ ಬಸ್ ಹೋಗುತ್ತಾ?!!!! :p :p
ಅವನು: "?????!???!?!!??****???"

No comments:
Post a Comment