ಮಾಗಿಯ ಛಳಿಯ ಆ ದಿನ. ಚಳಿ ಅನ್ನುವುದು ಸರಿಯಾದ ಕನ್ನಡ ವ್ಯಾಕರಣ ಅಲ್ಲವೇ? ಇಲ್ಲಿ ಛಳಿ ಅಂತ ಉಪಯೋಗಿಸುವುದಕ್ಕೂ ಒಂದು ಕಾರಣವಿದೆ. ಆಂಗ್ಲ ಭಾಷೆಯಲ್ಲಿ ಸೂಪರ್ಲೇಟೀವ್ ಅನ್ನುವ ಬಳಕೆ ನಮ್ಮಲ್ಲಿ ಹಲವರಿಗೆ ಗೊತ್ತೇ ಇದೆ. ಇದಕ್ಕಿಂದ ಅದು, ಅದಕ್ಕಿಂತ ಇನ್ನೊಂದು ಮಹದಾದದ್ದು ಅಂತ ಹೋಲಿಕೆಗೆ ನಿಲ್ಲಿಸುವಾಗ ಭಾಷಾಪ್ರಯೋಗ ಬದಲಾಗುತ್ತದೆ. ಅದಕ್ಕೆ ಚಳಿ ಅನ್ನುವುದನ್ನು ಛಳಿ ಅಂತ ಇಲ್ಲಿ ಬರೆಯುತ್ತಿದ್ದೇನೆ. ಇಂಥ ಛಳಿಯ ಪ್ರಾರಂಭದ ಆ ರಾತ್ರಿ.
ಬೆಡ್ ರೂಮ್ ಮೂಲೆಯ ಕಿಟಕಿಯ ಬಾಗಿಲಿನಲ್ಲೊಂದು ಕುರುಡ (ಒಂದು ಜಾತಿಯ ಹುಳ) ತನ್ನ ಗೂಡು ಕಟ್ಟುವ ಅವಸರದಲ್ಲಿ ಬಾಗಿಲನ್ನು ಕೊರೆದು ಒಂದು ಚಿಕ್ಕ ತೂತು ಮಾಡಿತ್ತು, ಪಾಪ ಅದು ಚಿಕ್ಕ ಜೀವವಲ್ಲವೇ? ಅದಕ್ಕೂ ಛಳಿ ಆಗುವುದಿಲ್ಲವೇ? ತನ್ನದೂ ಒಂದು ಪುಟ್ಟ ಸುಂದರ ಸಂಸಾರಕ್ಕಾಗಿ ಆ ಪಟ್ಟಣದ ಬೃಹತ್ ಅಪಾರ್ಟ್ಮೆಂಟ್ ಎತ್ತರದ ಮಹಡಿಯ ಫ್ಲ್ಯಾಟ್ ಮೂಲೆಯ ಕಿಟಿಕಿಯ ಸಂದಿನಲ್ಲಿ ಬಾಗಿಲ ಕೊರೆದು ಮಣ್ಣು ಮರ ಸೇರಿಸಿ ಒಂದು ಚಿಕ್ಕ ಗೂಡು ಕಟ್ಟಿತ್ತು. ಮನೆಯಲ್ಲಿ ಬಾಡಿಗೆಗಿದ್ದ ಹುಡುಗನಿಗೆ ಇದರ ಅರಿವಿಲ್ಲ.. ಅವನ ಪ್ರಪಂಚವೇ ಬೇರೆ. ಕೆಲಸ ಮನೆ, ಮನೆ ಕೆಲಸ. ಮಧ್ಯದಲ್ಲೊಂದು ಗರ್ಲ್ ಫ್ರೆಂಡ್.. ಕೆಲಸ ಮುಗಿಸಿ ಮನೆಗೆ ಬಂದು, ಫೋನ್ ನಲ್ಲಿ ಹುಡುಗಿಯೊಂದಿಗೆ ಕಿತ್ತಾಡಿ, ಹಾಸಿಗೆಯ ನೋಡಿದರೆ ಸಾಕು, ಅಷ್ಟೇ ಅವನಿಗೆ ದಿನದಂತ್ಯ.
ಹಾಗೆ ಮಾಗಿಯ ಛಳಿಯ ಆ ರಾತ್ರಿ, ಮೈ ಕೈ ಎಲ್ಲ ಕೊರೆಯುವ ಚಳಿ. ಎಂದಿನಂತೆ ಗರ್ಲ್ ಫ್ರೆಂಡ್ ನೊಂದಿಗೆ ಅಂದೂ ಭಿನ್ನಾಭಿಪ್ರಾಯಗಳನ್ನು ತೋಡಿಕೊಂಡು, ನಂತರ ಬೆಚ್ಚಗಿನ ಸ್ವೆಟರ್, ಸ್ಕಾರ್ಫ್, ಶಾಲು ಎಲ್ಲವೂ ಧರಿಸಿ ತನ್ನ ನಲ್ಮೆಯ ಮಂಚವೇರಿದ್ದಾನೆ. ದಪ್ಪದ ಬ್ಲ್ಯಾಂಕೆಟ್ ಹೊದ್ದು ಕಣ್ಣು ಮುಚ್ಚ್ಚಿದ. ಇನ್ನೇನು ನಿದ್ದೆ ಮಾಡಬೇಕು ಅನ್ನುವಷ್ಟರಲ್ಲಿ ಕಿಟಕಿಯ ಬಾಗಿಲ ಸಂದಿನಿಂದ ಬೀಸಿತು ಕುಳಿರ್ಗಾಳಿ. ಕಿಟಿಕಿಯಿಂದ ಸುಳಿದ ತುಣುಕು ಗಾಳಿ ಕಿವಿಯಿಂದ ನುಗ್ಗಿ, ಇನ್ನೇನು ಸ್ವಪ್ನ ಲೋಕಕ್ಕೆ ಲಗ್ಗೆ ಇಡಲು ಹಪಹಪಿಸುತ್ತಿದ್ದ ಅವನ ಸುಪ್ತ ಮನಸ್ಸನ್ನು ಸ್ವಗತಕ್ಕೆ ಮರಳಿಸಿತ್ತು. ಹುಡುಗನಿಗೆ ಎಲ್ಲಿಲ್ಲದ ಕೋಪ ಬಂತು, ಎಲ್ಲ ಬಾಗಿಲನ್ನು ಮುಚ್ಚಿ ಬಂದಿದ್ದೇನೆ, ಗಾಳಿ ಎಲ್ಲಿಂದ ಬರುತ್ತಿದೆ ಅಂತಲೇ ಅರ್ಥವಾಗುತ್ತಿಲ್ಲ. ಹಾಸಿಗೆಯಿಂದೆದ್ದು ಬೆಡ್ ರೂಮಿನ ಕಿಟಕಿಯ ಪರಿಶೀಲಿಸಾಲಾರಂಭಿಸಿದ, ಕಂಪ್ಯೂಟರ್ ಮಾನಿಟರ್ ನೋಡಿ ನೋಡಿ ಮೂವತ್ತು ಭಾಗ ದೃಷ್ಟಿ ಕಳೆದುಕೊಂಡಿದ್ದ ಆತನಿಗೆ, ಕುರುಡ ಹುಳ ಮಾಡಿದ ಆ ಚಿಕ್ಕ ನಾಜೂಕು ತೂತು ಕಾಣಲಿಲ್ಲ. ಕೋಪದಿಂದ ತೆರೆದಿದ್ದ ಕರ್ಟನ್ ಸರಿಸಿ ಮತ್ತೆ ಹೋಗಿ ಮಂಚದ ಮೇಲಿದ್ದ ಬೆಚ್ಚನೆಯ ಬ್ಲ್ಯಾಂಕೆಟ್ ಚೆನ್ನಾಗಿ ಮುಸುಗೆಳೆದು ಮಲಗಿದ. ಈ ಸಾರಿ ಕಿಟಕಿಯಿಂದ ಸುಳಿದ ಗಾಳಿ ಆತನನ್ನು ಸೋಕಲಿಲ್ಲ. ಚಳಿಯೂ ನಿಯಂತ್ರಣಕ್ಕೆ ಸಿಕ್ಕಿತ್ತು. ಆದರೆ ಏನೋ ಒಂದು ತರಹದ ಅಸಮಾಧಾನ! ಉಸಿರುಗಟ್ಟುತ್ತಿದೆ.. ಕತ್ತಲೆಯಿದೆ, ಬೆಚ್ಚನೆಯ ಅನುಭವ, ಏನೋ ಒಂದು ತರಹದ ಸುಖ ಅಂತ ಅನಿಸಿದರೂ ಸಹ ಉಸಿರುಗಟ್ಟುವ ಅನುಭವ ಹುಡುಗನನ್ನು ಕಾಡಹತ್ತಿತ್ತು. ಮುಸುಗು ಹಾಕಿ ಮಲಗದಿದ್ದರೆ ಹೊರಗಿನ ಚಳಿ, ಮುಸುಗು ಹಾಕಿ ಮಲಗಿದರೆ ಉಸಿರುಗಟ್ಟುವ ವಾತಾವರಣ. ಎನಾದರಾಗಲಿ ಉಸಿರುಗಟ್ಟಿ ಸಾಯುವ ಬದಲು, ಉಸಿರು ನೀಡುವ ತಂಗಾಳಿಯೊಂದಿಗೆ ಸೆಣಸುವ ಅಂತ ಹುಡುಗ ತೀರ್ಮಾನಿಸಿದ್ದ.

ಮುಸುಗನ್ನು ತೆಗೆದು ಕುಳಿರ್ಗಾಳಿಗೆ ಮುಖ ಕೊಟ್ಟು ಮಲಗಿದ್ದ. ಸ್ವಲ್ಪ ಹೊತ್ತು ಕೋಸರಾಡಿದರೂ ಸಹ ಉಳಿದ ರಾತ್ರಿ ಹಿತವಾಗಿ ನಿದ್ರಿಸಿದ್ದ.
ಬೆಳಿಗ್ಗೆ ಆರು ಘಂಟೆ, ಫೋನ್ ಅಲಾರಾಂ ರಿಂಗಣಿಸಿತ್ತು. ಎದ್ದು ಆಫ್ ಮಾಡುತ್ತಿದ್ದಂತೆಯೇ, ವ್ಹಾಟ್ಸಪ್ಪ್ ನೋಟಿಫಿಕೇಷನ್ ಕಡೆಗೆ ದೃಷ್ಟಿ ಹೊರಳಿತ್ತು. ಆತನ ಹುಡುಗಿಯ ಮೆಸೇಜ್ ಹೀಗಿತ್ತು, 'ನಿನಗೆ ನನಗಿಂತಲೂ ನಿನ್ನ ಕನಸುಗಳೇ ಮುಖ್ಯವಾದರೆ, ನನ್ನ ಮರೆತುಬಿಡಬಹುದು'. ಪ್ರತಿದಿನವೂ ಕಾಡಿ ಬೇಡಿ ಹುಡುಗಿಯನ್ನು ಸಮಾಧಾನಿಸುತ್ತಿದ್ದ ಹುಡುಗ ಇಂದು ಅವಳನ್ನು ತಡೆಯಲಿಲ್ಲ. ಉಸಿರುಗಟ್ಟಿಸುವ ಪ್ರೀತಿಗಿಂತ, ಒಂಟಿತನದ ಜೀವನವೇ ಆತನಿಗೆ ಲೇಸು ಅನಿಸಿತ್ತು. ಹಾಗಾಗಿಯೂ ಅವನು ಒಂಟಿ ಏನಲ್ಲ. ಅವನಲ್ಲಿ ಜಗತ್ತನೇ ಪ್ರೀತಿಸುವ ಕನಸುಗಳಿದ್ದವು, ಕನಸನ್ನು ಗೆಲ್ಲುವ ಛಲವಿತ್ತು, ಹಟವಿತ್ತು. ಹೊದ್ದಿಗೆ ತೆಗೆದು ಬಾತ್ ರೂಮಿಗೆ ನಡೆದ, ಪರದೆಗಟ್ಟಿದ ಮುಖ ಕಣ್ಣುಗಳ ಸ್ವಚ್ಛವಾಗಿ ತೊಳೆದ. ಕಣ್ಣಲ್ಲಿ ಮಿಂಚಿತ್ತು, ಮನಸ್ಸಲ್ಲಿ ಹುರುಪಿತ್ತು. ಫ್ರೆಶ್ ಆಗಿ ಬಂದು ಫೋನ್ ತೆಗೆದು ವ್ಹಾಟ್ಸಪ್ಪ್ ನಲ್ಲಿ ಅವಳಿಗೆ ಮರು ಉತ್ತರಿಸಿದ್ದ. 'Wish you good luck. I will live for myself, at least from NOW'.
ಅಂದಿನಿಂದ ಆತ ನಿಜವಾಗಿಯೂ ಅವನಿಗಾಗಿಯೇ ಬದುಕಿದ್ದ. ಮುಸುಕಿನ ನಂಬಂಧವ ತೊರೆದು, ಸ್ವಚ್ಛಂದ ಕನಸಿನ ಲೋಕವ ನೈಜತೆಯ ಮಾಡುವ ಹೊಸ್ತಿನಲ್ಲಿ ಮನಸ್ಸನ್ನು ತಂದು ನಿಲ್ಲಿಸಿದ್ದ.

No comments:
Post a Comment