ಅದ್ಯಾಕೋ ಆಫೀಸ್‌ನಲ್ಲಿ ಇತ್ತೀಚೆಗೆ ಇಂಗ್ಲೀಷ್ ಹಾಡು ಕೇಳುವ ಹೊಸ ಚಟಕ್ಕೆ ಬಿದ್ದಿದ್ದೆ... 'ವಿಮಾನವ ನೋಡುತ್ತಾ ಹುಡುಗಿಯೊಬ್ಬಳು ಅದನ್ನೇ ಉಲ್ಕೆಯೆಂದು ಭಾವಿಸಿ ಅದರಲ್ಲಿ ತನ್ನ ಆಸೆಗಳನ್ನು ತೋಡಿಕೊಳ್ಳಬಹುದಾ ಎಂಬ ಭಾವವು ಮನಸ್ಸಿಗೆ ತಾಕಿತ್ತು. ಅದೇ ಹಾಡಿನಲ್ಲಿ ಜೀವನ ಕೆಲವೊಮ್ಮೆ ನಮ್ಮನ್ನು ಕತ್ತಲೆಗೆ ಸರಿಸುತ್ತದೆ.. ಅದೆಷ್ಟೋ ಬಾರಿ ನಮ್ಮ ಫೋನ್ ದಿಟ್ಟಿಸುತ್ತಾ ನಮ್ಮನ್ನು ನೆನೆಸಿಕೊಳ್ಳದ ಕೆಲವರ ಕಾಲ್ ಮೆಸೇಜ್ಗಳಿಗಾಗಿ ಕಾಯುತ್ತಾ ಕುಳಿತುಬಿಡುತ್ತೇವೆ.. ಆದರೆ ಜೀವನ ಅದನ್ನು ಮರೆಸಿ ನಿಮ್ಮ ಕತ್ತಲೆಯನ್ನು ಬೆಳಕಿಗೆ ಮತ್ತೊಮ್ಮೆ ತಳ್ಳುತ್ತದೆ. ಅದ್ಯಾವುದೋ ಕಾಣದ ಕೈ ನಿಮ್ಮನ್ನು ಪಾತಾಳದಿಂದ ಎತ್ತಿ ಮತ್ತೆ ಮುನ್ನಡೆಸುತ್ತದೆ!! ಇಷ್ಟು ನನ್ನ ಜೀವನದಲ್ಲಿ ನಡೆದದ್ದಲ್ಲದೆ ಜೀವನ ಮತ್ತೊಮ್ಮೆ ನನ್ನನ್ನು ಕತ್ತಲಿಗೆ ತಳ್ಳಿದ್ದು ತೀರಾ ದುರದೃಷ್ಟಕರ!
ಅವಳು ಕೈ ಕೊಟ್ಟು ಅರ್ಧ ವರುಷವಾಯಿತು.. ಇವಳು ಕೈ ಬಿಟ್ಟು ಒಂದು ವಾರವಾಯಿತು..! ಟೋಟಲಿ ೨ ವರುಷಗಳ ನನ್ನ ಕನಸಿನ ಜೀವನ ನುಚ್ಚು ನೂರಾಯಿತು. ಹೂವಿನ ದಳಗಳನ್ನು 'ಇವಳು ವಾಪಸ್ ಬರ್ತಾಳೆ, ಬರಲ್ಲ ಅಂತ ಕಿತ್ತು ಖಾಲಿ ಮಾಡಿ ಪಾಪ ಕಟ್ಟಿಕೊಂಡದ್ದೂ ಆಯಿತು.. ಶಾಲಾ ಸಮಯದಲ್ಲಿ ಕಲಿತ 'ಫ್ಲೆಮ್ಸ್' ಜೊತೆಗೆ ನಮ್ಮ ಹೆಸರು ಸೇರಿಸಿ ಅಪ್ಪಿ ತಪ್ಪಿ ನಮ್ಮ ಸಂಭಂಧಗಳು ತಪ್ಪಾಗಿ ಗುರುತಾಗಿವೆಯೇ ಅಂತ ತಾಳೆ ನೋಡಿದ್ದೂ ಆಯಿತು.. ಇವತ್ತು ಇಂಡಿಯಾ ಗೆದ್ದರೆ.. ಇವಳು ಮತ್ತೆ ವಾಪಸ್ ಬರ್ತಾಳೆ ಅಂತ ಕನಸು ಕಂಡದ್ದಾಯಿತು.. ಇಂಡಿಯಾ ಗೆಡ್ದದ್ದಾಯಿತು.. ನೀ ಬರಲೇ ಇಲ್ಲ. ನೀ ಬರೋದು ಇಲ್ಲ..
ಸರಿ.. ನನಗುಲಿದದ್ದು ಯೂ ಟ್ಯೂಬ್ ಮತ್ತೊಮ್ಮೆ! 'ನಾ ರಾಶಿ ರಾಶಿ ಕನಸ ಕೂಡಿಸಿಟ್ಟೆ..! ನೀ ಅದರ ಮೇಲೆ ಬೆಂಕಿ ಸುರಿದು ಹೋದೆ.' ಹೋದರೆ ಹೊಗೆ ನೀ ದೂರ' ಹಾಡು ಕೇಳಿ ನಿನ್ನ ಬಯ್ದರೂ ನೀ ಮನದಿಂದ ಹೋಗಲಿಲ್ಲ. ಶನಿಯಂತೆ ಅದೇ ಮನೆಯಲ್ಲೇ ಕುಳಿತೆ! ಹೋಗಲಿ ನೀ ಅಂತೂ ಕೈ ಹಿಡಿಲಿಲ್ಲ.. ನೀ ತಂದ ನೋವನ್ನು ಮರೆಸುವೇ ಅಂತ ಜೀವನ ಕೊಟ್ಟ ಇನ್ನೊಂದು ಜೀವ ಕೂಡ ನಿನ್ನ ಕಥೆ ಕೇಳಿ ನನ್ನ ಹೃದಯದಲ್ಲಿ ಬೆಳೆದ ಹೊಸ ಪೈರನ್ನು ಚಿವುಟಿಯೇ ಬಿಟ್ಟಳು. ಅದಲ್ಲದೆ, 'ನಿನ್ನೊಂದಿಗಿದ್ದು ನನ್ನ ಜೀವನ ಹಾಳು ಮಾಡಿಕೊಳ್ಳಲು ನಾನು ಮೂರ್ಖಳೆನಲ್ಲ ಅನ್ನುವ ಮಾತು ನೀ ಹಾಕಿದ್ದ ಬರೆಗೆ ಅವಳು ಉಪ್ಪು ಹಾಕಿ ನೆಕ್ಕಿದಂತಿತ್ತು.
ನನ್ನ ಪಾಡಿಗೆ ನನ್ನದೇ ಕನಸಿನ ಲೋಕವನ್ನು ಕಟ್ಟಿಕೊಂಡು ಯಾವುದೋ ದೇಶದಲ್ಲಿ ಟ್ರಾವೆಲ್ ಫೋಟೋಗ್ರಾಫರ್ ಆಗಿ ಕ್ಯಾಮರಾ ಪುಸ್ತಕ ಹಿಡಿದು ಹೊಸ ಜನ ಹೊಸ ಮನ ಹೊಸ ಗಾಳಿ ಹೊಸ ಹೊಂಗಿರಣವ ತಾಕಲು ಬಯಸುತ್ತಿದ್ದ ಕಂಗಳಲಿ ಕತ್ತಲೆ ತುಂಬಿದ ನಿಮ್ಮಿಬ್ಬರನ್ನು ನಾ ಎಂದಿಗೂ ಕ್ಷಮಿಸುವುದಿಲ್ಲ. ಪ್ರತಿ ಸಾರಿಯೂ ನ್ಯೂಸ್ ಚಾನೆಲ್‌ನಲ್ಲಿ ನಿರ್ಭಯಳಂತ ಹುಡುಗಿಯ ದುರಂತ ಕಥೆಯನ್ನು ತೋರುವಾಗ ನಮ್ಮೆಲ್ಲರ ಮನ ಮಿಡಿಯುತ್ತದೆ. ಹುಡುಗನೊಬ್ಬ ಹುಡುಗಿಯ ಜೀವನದಲ್ಲಿ ಆಟವಾಡಿದರೆ ಆತನಿಗೆ 'ಫ್ಲರ್ಟ್' ಎಂಬ ಪಟ್ಟ ಕಟ್ಟಿ ಆತನ ಗುಣಕ್ಕೆ ಘೇರಾವ್ ಹಾಕುತ್ತೀರಾ. ಅದೇ ಹುಡುಗಿಯರು ಅದನ್ನೇ ಹುಡುಗನೊಬ್ಬನಿಗೆ ಹುಸಿ ಕನಸುಗಳನ್ನು ತುಂಬಿ, ಬೇಡ ಅಂದರೂ ಬಿಡದೆ ತಲೆಯ ಮೇಲೆ ಕುಳಿತು ನೀನೇ ಬೇಕು ಅಂತ ಮನಸು ಕೆಡಿಸಿ, ಅದ್ಯಾಕೋ ಸಂದರ್ಭಗಳು ತನ್ನ ಕಡೆಗೆ ವಾಲುತ್ತಿಲ್ಲ ಅನಿಸುವಾಗ ಬೇರೆಡೆ ಮೀನಿನಂತೆ ಜಾರಿಕೊಳ್ಳುವ ನೀವು ಅದೆಂತವರು? ನಿಮಗೆ ಧೈರ್ಯವಿಲ್ಲವ ಅಥವಾ ಒಂದು ಹೃದಯೋದೊಂದಿಗೆ ಆಡಿ ಖುಷಿ ಪಡೆದುಕೊಳ್ಳುವ ಹುಚ್ಚು ಚಟವಾ? ಅದೇ ಶುರುವಿನಲ್ಲಿ 'ಅವನನ್ನು ನಾ ಬಿಡುವುದಿಲ್ಲ, ನಮ್ಮ ಮನೆಯಲ್ಲಿ ಪೂರ್ಣ ಒಪ್ಪಿಗೆಯಂದಿದ್ದ ನೀನು', ಆರು ತಿಂಗಳ ನಂತ್ರ 'ಯಾಕಮ್ಮ ಈಗ ಬಿಟ್ಟೆ ಆಂದ್ರೆ, 'ಹೀ ಈಸ್ ಆಕ್ಟಿಂಗ್ ವಿಯರ್ಡ್' ಅನ್ನುವ ಒಂದೇ ವಾಖ್ಯದಿಂದ ಮಾಡಿದ ಪಾಪವನ್ನು ಕೈ ತೊಳೆದುಕೊಂಡ್ಯಲ್ಲ.. ನಾ ಹೇಗೆ ನಿನ್ನಲ್ಲಿಟ್ತಿದ್ದ ವಿಶ್ವಾಸದ ಪಾಪ ಕಳೆದುಕೊಳ್ಳಲಿ?
ಪ್ರಾಕ್ಟಿಕಲ್ ಆನೊ ಒಂದು ವಿಷಯ ನನಗೆ ತಿಳಿದದ್ದು ನನ್ನ ಕಾಲೇಜ್ ದಿನಗಳಲ್ಲಿ. ಅದೂ ಕೇವಲ ಭೌತ,ರಸಾಯನ,ಜೀವಶಸ್ತ್ರಗಳಲ್ಲಿ ಮಾತ್ರ. ಈ ತರಹ ಜೀವನದಲ್ಲಿ ನೀವು ತೀರಾ ಒಂದು ಜೀವದ ಮೇಲೆ ಪ್ರಯೋಗಿಸುತ್ತೀರಾ ಅಂತ ದೇವರಾಣೆ ಅಂದುಕೊಂಡಿರಲಿಲ್ಲ. ನಾವೆಲ್ಲ ಮಕ್ಕಳಾಗಿ ಆಡುತ್ತಿದ್ದಾಗ, ಒಂದು ಸುಳ್ಳು ನಿಜಾ ಮಾಡಲು ದೇವರಾಣೆ ಹಾಕುವಂತೆ, ನೀವು ಅಷ್ಟೇ ಸುಲಭವಾಗಿ 'ಪ್ರಾಮಿಸ್' ಮಾಡಿಬಿಟ್ಟಿರಿ. ಸ್ವಲ್ಪವೂ ಮರ್ಯಾದೆ ಇಲ್ಲದೆ ಹೇಗೆ ಜಾರಿಕೊಂಡಿರಿ, ನಿಮಗೆ ಸ್ವಲ್ಪವೂ ಮನಃ ಸಾಕ್ಷಿಯನ್ನುವುದಿಲ್ಲವೇ? ಅದು ಹೇಗೆ ಅಷ್ಟು ಸಲೀಸಾಗಿ ಎಲ್ಲವನ್ನೂ ಮರೆತು ಇಸೀಗೋಯಿಂಗ್ ಆಗಿ ಇದ್ದು ಬಿಡುತ್ತೀರಿ? ದೇವರು ನಿಮ್ಮಂಥವರ ಪಾಲಿಗೆ ಮಾತ್ರ ಇದ್ದಾನೆಯೇ? ನಮ್ಮಂಥ ಎಮೋಷನಲ್ ಹುಡುಗರನ್ನ ಕೇವಲ 'ಈಡಿಯಟ್' ಅಂತ ಅಂದ್ಕೋತನಾ? ಎಂತ ಕಥೆ? ನಿಜಕ್ಕೂ ನಿಮ್ಮ ದೆಸೆಯಿಂದ ದೇವರಿಗೆ ಅದೆಷ್ಟು ಬಾರಿ ಬೈದಿದ್ದೇನೆ. ನಿಮ್ಮ ಬುದ್ಧಿಗೇಡಿತನದಿಂದ ಅವನು ಬಯ್ಯಿಸಿಕೊಳ್ಳಬೇಕು. ನಿಮ್ಮಂಥ ಹುಡುಗಿಯರಿಂದ ಒಳ್ಳೆಯ ಹುಡುಗಿಯರೂ ಸಹ ತಲೆ ಎತ್ತಿ ಬಾಳಲಾರರು. ಯಾಕೆ ಹೀಗೆ ನೀವೆಲ್ಲ? ಸಚ್ ಆ ಡಿಸ್‌ಗ್ರ್ರೆಸ್!
ನನಗೆ ಒಳ್ಳೆಯ ಗೆಳತಿಯಿರಾದ್ದಾರೆ, ಗೆಳೆಯರಿದ್ದಾರೆ.. ನಿಮ್ಮಂತವರಿಂದ ಅವರಿಗೆ ದಿನವೂ ನನ್ನ ಬಗ್ಗೆ ಯೋಚಿಸಿ ತಲೆ ಕೆಡೆಸಿಕೊಳ್ಳುವಂತ ತಪ್ಪು ಮಾಡಿದ್ದೀರಿ. ಹಲವು ಬಾರಿ ಅಬ್ಬಾ ಫ್ರೆಂಡ್ಸ್ ಇನ್ನೂ ಇದ್ದಾರಲ್ಲ ಇಂಥ ಕೆಟ್ಟ ವ್ಯಕ್ತಿಗಳ ಮಧ್ಯೆ ಅನ್ನೋದು ಖುಷಿಯೂ ಕೊಡುತ್ತದೆ. ಇಷ್ಟ ಬಂದಾಗ ಆಟವಾಡಿ, ಕಷ್ಟ ಬಂದಾಗ ಟಾ ಟಾ ಹೇಳುವ ನಿಮ್ಮಂಥ ಚೀಟ್ ಗಳಿಂದಲೇ ನಿಜವಾದ ಸ್ನೇಹಿತ್ಯಾರರು ಆನೋದೊಂದು ಗೊತ್ತಾಗುವುದೇ ದೊಡ್ಡ ಅನುಕೂಲ.
ದಯವಿಟ್ಟು ಈ ರೀತಿ ಇನ್ನೊಂದು ಹುಡುಗನಿಗೆ ಮಾಡ್ಬೇಡಿ.. ಪ್ಲೀಸ್...!! ಹುಡುಗರನ್ನು ದೂರದಿಂದ ನೋಡಿ, ಕಾಮೆಂಟ್ ಮಾಡಿ, ಅವನ ಪಾಡಿಗೆ ಅವನನ್ನ ಇರಲು ಬಿಟ್ಬಿಡಿ.. ಮನಸ್ಸು ಒಬ್ಬರು ಆಡಿಹೋಗುವ ಆಟದ ಬಯಲು ಅಲ್ಲ.. ಯಾವುದೋ ಶಾಪಿಂಗ್ ಮಾಲ್ನಲ್ಲಿ ಟ್ರಯಲ್ ಮಾಡಿ ಬೇಡ ಅನ್ನುವ ಬಟ್ಟೆಯೂ ಅಲ್ಲ ಅನುವುದು ನೆನಪಿರಲಿ. ನಿಮ್ಮ ಲವ್ ಇರದಿದ್ದರೂ ಪರವಾಗಿಲ್ಲ. ಅವನ ಲೈಫ್ನ್ನ್ ಅವನೇ ಹೇಟ್ ಮಾಡುವಂತೆ ಮಾಡ್ಬೇಡಿ!
ಹುಡುಗ್ರೆ ನೀವು ಅಷ್ಟೇ.. ಹುಶಾರಾಗಿರಿ..!

No comments:
Post a Comment