ಇದೊಂದು
ವಿಚಾರ ಮನಸ್ಸಿನಲ್ಲಿ ಬಹಳ ದಿನದಿಂದ ನಿಂತ
ನೀರಾಗಿತ್ತು. ಬರೆಯಲು ಯಾಕೋ ಗಳಿಗೆಯೇ
ಕೂಡಿಬರಲಿಲ್ಲ. ಬರೆಯಲು ಒಂದು ರೀತಿಯ
ಹುರುಪು ಬೇಕಾಗುತ್ತದೆ.. ಸುಮ್ಮ ಸುಮ್ಮನೆ ಬರೆದರೆ
ಹಸಿವಿಲ್ಲದೆ ಊಟ ಮಾಡಿದಂತೆಯೇ. ಸೇರುವುದಿಲ್ಲ.
ನಾನು ಹೊಸತಾಗಿ ಕೆಲಸಕ್ಕೆ ಸೇರಿದಾಗ
ನನ್ನ ಮೆನೇಜರ್ ಈ ಮಾತು
ಹೇಳಿದ್ದು ಇವತ್ತಿಗೂ ನೆನಪಿದೆ. ನಾವು ೨೧ ದಿನಗಳ
ವರೆಗೆ ಸತತವಾಗಿ ಏನು ಮಾಡುತ್ತೇವೋ
ಅದರಲ್ಲಿ ನಾವು ಕೌಶಲ್ಯತೆ ಪಡೆಯುತ್ತೇವೆ
ಅಂತ. ಬರೆವು ಅನ್ನುವುದನ್ನು ಮನಸ್ಸಿಗೆ
ಹಚ್ಚಿಕೊಳ್ಳಲೇಬೇಕು ಅಂತ ತೀರ್ಮಾನಿಸಿ ವರ್ಷಗಳಾದರೂ,
ಅದನ್ನು ಹವ್ಯಾಸಕ್ಕೆ ಸೇರಿಸಿ ತಿಂಗಳಂತೂ ಉರುಳಿದೆ.
ಈಗೀಗ ಬರೆಯುವುದಕ್ಕೂ ಖುಷಿ ಎನಿಸುತ್ತದೆ. ಓದುವವರು
ಮಾತ್ರ ಕಮ್ಮಿ.
ಹೋಗ್ಲಿ
ಬಿಡಿ.. ವಿಷ್ಯಕ್ಕೆ ಬರುವ.
ಶನಿವಾರ
ಇವತ್ತು, ಸಂಜೆ ಆಗಿದೆ ಕಾಫಿ
ಕುಡಿಯೋ ಟೈಮಿಗೆ ನೀರು ಬಿಸಿಗೆ
ಹಾಕಿ ಸ್ನಾನಕ್ಕೆ ಕಾಯುತ್ತಿದ್ದೇನೆ. ಊಟ ಮಾಡಲು ಆಸಕ್ತಿ
ಇಲ್ಲ.. ಟೀ ವಿ ಚಾಲೂ
ಮಾಡುತ್ತಲೇ ನ್ಯೂಸ್ ಚಾನೆಲ್ ಒಂದರಲ್ಲಿ
'ಕಿಸ್ ಆಫ್ ಲವ್ ಡೇ'
ಅಂತ ಏನೋ ಮಾಡ್ಬೇಕು ಅಂತ
ಯುವಜನರು ಯೋಚಿಸುತ್ತಿದ್ದಾರೆ, ಮತ್ತೆ ಅದಕ್ಕೆ ಸರ್ಕಾರದವರು
ಅಡ್ಡಿಯಾಗಿದ್ದಾರೆ ಅಂತ ಏನೋ ಹೇಳ್ತಾ
ಇದ್ದದ್ದು ಕೇಳಿ ವ್ಹಾಟ್ಸಾಪ್ ಮತ್ತೆ
ಫೇಸ್ಬುಕ್ ನಲ್ಲಿ ಹಲವು
ಬಾರಿ ಹಲವಾರು ಶೇರ್ ಮಾಡಿದ್ದ
ವಿಚಾರವೊಂದು ನೆನಪಿಗೆ ಬಂತು. 'ಇಟ್ಸ್
ಓಕೇ ಟು ಪಿಸ್ ಇನ್
ಪಬ್ಲಿಕ್, ಬಟ್ ನಾಟ್ ಓಕೇ
ಟು ಕಿಸ್ ಇನ್ ಪಬ್ಲಿಕ್'.
ಅಂದರೆ ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ಮಾಡಬಹುದು, ಮುತ್ತು
ಯಾಕೆ ಕೊಡಬಾರದು? ಹೌದಪ್ಪಾ.. ಸರಿಯಾದ ಮಾತು! ಉಚ್ಚೆ
ಹೊಯ್ಯೋಕೆ ನಾಚಿಕೆ ಇಲ್ಲದವರು, ಮುತ್ತು
ಕೊಡೋಕೆ ಯಾಕೆ ನಾಚಿಕೆ ಪಡಬೇಕು?
ಅಲ್ವಾ? ಇಲ್ಲಿ ನಾನು ಪರ
ಅಥವಾ ವಿರೋಧ ಪಕ್ಷ ವಹಿಸುತ್ತಿಲ್ಲ.
ನೈಜತೆಯ ಬಗ್ಗೆ ಮಾತನಾಡೋಣ.
ಭಾರತೀಯ
ಸಂಸ್ಕೃತಿಯಲ್ಲಿ ನಾನು ಹುಟ್ಟಿ ಬೆಳೆದು
ತಿಳಿದು ಬಂದ ಹಾಗೆ ದಾರಿ
ಬದಿಯಲ್ಲಿ ಮೂತ್ರ ಮಾಡಬೇಕು ಅಂತ
ಏನು ಬರೆದಿಲ್ಲ.. ಮುತ್ತು ಕೊಡಬೇಕು ಅಂತಲೂ
ಬರೆದಿಲ್ಲ. ಸಾರ್ವಜನಿಕವಾಗಿ ಮುತ್ತು ಕೊಡುವುದು ನಮ್ಮ
ಸಂಸ್ಕೃತಿ ಖಂಡಿತ ಅಲ್ಲ. ನನಗೆ
ತಿಳಿದ ಮಟ್ಟಿಗೆ ಅಮೇರಿಕ ಯುರೋಪ್
ಖಂಡಗಳಲ್ಲಿ ಈ ತರಹದ ಸಂಸ್ಕೃತಿ
ಇದೆ. ಅದು ತಪ್ಪಲ್ಲ ಕೂಡ.
ಅದು ಅವರು ಬೆಳೆದ ಸಂಸ್ಕೃತಿ.
ಅಲ್ಲಿಯ ಸಂಸ್ಕೃತಿಯಲ್ಲಿ ತಂದೆ ತಾಯಿ ಮಕ್ಕಳನ್ನು
ಸ್ವಾವಲಂಭಿಯಾಗಿ ಬೆಳೆಸಿಬಿಡುತ್ತಾರೆ.. ಮಗು ಹುಟ್ಟಿ ಸ್ವಲ್ಪೇ
ತಿಂಗಳಲ್ಲಿ ಮೊಲೆ ಹಾಲನ್ನು ಬಾಟಲಲ್ಲಿ
ಶೇಖರಿಸಿ ಮಕ್ಕಳಿಗೆ ಕುಡಿಸುವ ಮಟ್ಟಿಗೆ ತಾಯಿ
ಮಗುವನ್ನು ಹುಟ್ಟಿನ ಶುರುವಿನಲ್ಲಿಯೇ ಸ್ವಾವಲಂಬಿಯಾಗಿ
ಬೆಳೆಸುವ ಪ್ರಯತ್ನ ಮಾಡುತ್ತಾಳೆ. ಅದು
ಮಗುವಿಗೆ ಎರಡು ಅಥವಾ ಮೂರು
ವರ್ಷ ವಯಸ್ಸು ದಾಟುತ್ತಿದ್ದಂತೆಯೇ ಮಗುವನ್ನು
ಅದರದೇ ಆದ ಒಂದು ಬೇರೆ
ಕೊನೆಯಲ್ಲಿ ಒಂಟಿಯಾಗಿ ಮಲಗುವ ಅಭ್ಯಾಸ ಮಾಡಿಸುತ್ತಾಳೆ.
ಮಗು ಮೊದ ಮೊದಲಿಗೆ ಹೆದರಿದರೂ
ಹೋಗು ಹೋಗುತ್ತಾ ಅಭ್ಯಾಸ ಮಾಡಿಕೊಳ್ಳುತ್ತದೆ. ಅಪ್ಪ
ಅಮ್ಮ ಅನ್ನುವ ಭಯವನ್ನು ಕಳೆದುಕೊಳ್ಳುತ್ತದೆ.
ಅದಕ್ಕೆ ನಾನು ನಾನೇ, ಅವರಿಂದ
ನಾನಲ್ಲ ಅನ್ನುವ ಭಾವ ಬೆಳೆಸಿಕೊಳ್ಳುತ್ತದೆ.
ಕಿಸ್ ಹಾಗೂ ಸೆಕ್ಕ್ಶ್ ಅನ್ನುವುದು
ತೀರಾ ಸ್ವಾಭಾವಿಕ ಅನ್ನುವುದು ಅವರ ತಂದೆ ತಾಯಿ
ಸಮಾಜ ಬದುಕುವ ರೀತಿಯಿಂದ ಅರಿತುಬಿಡುವರು.
ತೀರಾ ಬೇಡ ಅಂದರೂ ಸಹ
ಮಕ್ಕಳು ತಲೆಕೆಡಿಸಿಕೊಳ್ಳುವುದಿಲ್ಲ, ಅವರ ದಾರಿಯನ್ನು ಅವರು
ಹಿಡಿಡುಬಿಡುತ್ತಾರೆ. ಒಂದು ಮಟ್ಟಿಗೆ ಹೇಳುವುದಾದರೆ
ಅವರಿಗೆ 'ನನ್ನವರು' ಅನ್ನುವ ನಂಟು ಅವರಿಗಿರುವುದಿಲ್ಲ.
ಭಾವನಾತ್ಮಕವಾಗಿ ನಂಟು ಬೆಳೆಸಿಕೊಳ್ಳದ ಮಕ್ಕಳಿಗೆ
ತಂದೆ ತಾಯಿಯನ್ನು ಕಳೆದುಕೊಂಡು ಜೀವನದ ಮುಂದಿನ ದಾರಿಯನ್ನು
ಕಂಡುಕೊಳ್ಳುವುದು ಸುಲಭವೇ. ಅವರಲ್ಲಿ ಇಂಥ
ಕೆಲಸ ಮೇಲು ಅಥವಾ ಕೀಳು
ಅನ್ನುವುದಿಲ್ಲ. ಕಾಯಕವೇ ಕೈಲಾಸ ಅಂತ
ಬಸವಣ್ಣನವರು ಭಾರತೀಯರಿಗೆ ಭೋಧಿಸಿದರೂ ಸಹ ಅಳವಡಿಸಿಕೊಂಡವರು ಅಲ್ಲಿಯ
ದೇಶದವರು. ಒಂದು ಸಾರಿ ಕೆಲಸಕ್ಕೆ
ಕುಳಿತರೆ ಸಮಯಕ್ಕೆ ಸೆಡ್ಡು ಹೊಡೆಯುವಂತೆ,
ಬೆವರೂ ಕಲ್ಲಾಗಿ ಭಾರ ಪಡೆಯುವ
ಹಾಗೆ ಕೆಲಸಕ್ಕೊಂಡು ಬೆಲೆಯನ್ನು ತಂದುಕೊಡುವರು. ಮೊನ್ನೆ ಮೊನ್ನೆಯಷ್ಟೇ ನನ್ನ
ಸಹೋದ್ಯೋಗಿಗಳಿಬ್ಬರು ಅಮೆರಿಕಾದ ಫ್ರ್ಯಾಂಕ್ಲಿನ್ ಗೆ ಕೆಲಸದ ಮೇಲೆ
ಹೋಗಿ ಬಂದಾಗ ನಾ ಕೆಲಸದ
ವಿಚಾರದ ಬಗ್ಗೆ ಏನೋ ಸಹ
ಕೇಳಲಿಲ್ಲ. ಕೇಳಿದ್ದಿಷ್ಟೆ, " ಅವರು ದಿನಕ್ಕೆ ಎಷ್ಟು
'ಬ್ರೇಕ್' ತೆಗೆದುಕೊಳ್ಳುತ್ತಾರೆ"? ಅದಕ್ಕೆ ಅವರಿಂದ ಬಂದ
ಉತ್ತರ, "ಒಂದು ಘಂಟೆ. ಅಂದರೆ
೧೨:೩೦ ರಿಂದ ೧:೩೦". ಅದಕ್ಕೆ ನಾನು ಕೇಳಿದೆ,
'ಮಧ್ಯೆ ಕಾಫಿ, ಟೀ ಬ್ರೇಕ್'?
ಅದಕ್ಕವರು - "ಅವರು ಒಂದು ದೊಡ್ಡ
ಕ್ಯಾನ್ ಲಿ ಕಾಫಿ ತುಂಬಿಸಿಕೊಂಡು
ದಿನ ಇಡೀ ಅಲ್ಲೇ ಕುಳಿತಿರುತ್ತಾರೆ.
ಎಲ್ಲಿಗೂ ಹೋಗುವುದಿಲ್ಲ. ೫ ಘಂಟೆಗೆ ಸರಿಯಾಗಿ
ಮನೆಗೆ ಹೋಗುತ್ತಾರೆ.. ಅದರ ನಂತರ ಒಂದು
ನಿಮಿಷವೂ ಇರುವುದಿಲ್ಲ.
ಈಗ ನನ್ನ ಆಫೀಸ್ ಕಥೆ
ಹೇಳುತ್ತೇನೆ ಕೇಳಿ. ೫:೩೦
ರಿಂದ ೨:೩೦ ರ
ವರೆಗೆ ೯ ಘಂಟೆ ಕೆಲಸದ
ವೇಳೆ ಅಂತ ತೆಗೆದುಕೊಂಡರೆ, ನಮ್ಮಲ್ಲಿ
ಹಲವರ ಕೆಲಸದ ವೈಖರಿ ಈ
ತರ ಇರುತ್ತದೆ. ಹೋಗಿ ಕೂರುತ್ತಲೆ, ೩೦
ನಿಮಿಷ ಕಾಫಿಗೆ, ಸಿಗರೇಟ್ ಗೆ
೧೫ ನಿಮಿಷ. ಮುಕ್ಕಾಲು ಘಂಟೆ
ಅಲ್ಲೇ ತಡ. ಮತ್ತೆ ಒಂದು
ಘಂಟೆಯ ನಂತರ ತಲೆಬಿಸಿ ಮಾರಾಯ
ಅಂತ ಕಾಫಿ ಸಿಗರೇಟ್ ಬ್ರೇಕ್
ಇನ್ನೂ ೧೫ ನಿಮಿಷ ಮತ್ತೊಂದು
ಗಂಟೆಯಲ್ಲಿ ಊಟದ ಬ್ರೇಕ್ ಅಂತ
೪೫ ನಿಮಿಷದಿಂದ ಒಂದು ಘಂಟೆ.. ಇಲ್ಲಿ
ಮಾತ್ರ ಒಂದು ಘಂಟೆ ಬೇಕೇ
ಬೇಕು. ಲೇಟ್ ಯಾಕೆ ಅಂತ
ಯಾರಾದ್ರೂ ಕೇಳಿದ್ರೆ ಕೆಂಡದಂಥ ಕೋಪ. ಮತ್ತೆ
ವಾಪಾಸ್ ಬರುವಾಗ ೧೦ ನಿಮಿಷ
ಸಿಗರೇಟ್ ಬ್ರೇಕ್. ಮತ್ತೆ ಒಂದೆರಡು
ಘಂಟೆಯಲ್ಲಿ ಬೇರೆ ಸಹೋದ್ಯೋಗಿಗಳ ಕ್ಯುಬಿಕಲ್
ಲಿ ಕುಳಿತು ಅರ್ಥವಿಲ್ಲದ ಕಾಲ
ಹರಣ ಮಾಡುವ ಮಾತು.. ಉಪಯೋಗವಾಗುವಂಥದ್ದು
ಏನೋ ಇಲ್ಲ! ಸರಾಸರಿ ನಾವು
ಮಾಡುವ ಕೆಲಸ ೫:೩೦
ಘಂಟೆ ಮಾತ್ರ!!! ಯಾಕೆ? ಈ ವಿಚಾರದಲ್ಲಿ
ನಾವೇಕೆ ಅವರನ್ನು ಅನುಸರಿಸುವುದಿಲ್ಲ? ಕೆಲಸ
ಯಾಕೆ ನಿಯೈತ್ತಾಗಿ ಮಾಡುವುದಿಲ್ಲ? ಆಫೀಸ್ ಲಿ ಕೂಡ
ಕೆಲಸವಿಲ್ಲದ ಒಂದಷ್ಟು ಜನ ಮಾತು
ಹರಟೆ ಗಲಾಟೆ ಮಾಡುತ್ತಾ ಸಮಯ
ಕೊಳ್ಳುವುದಲ್ಲದೆ ಕೆಲಸ ಮಾಡುವವರಿಗೆ ಕಾಟ
ಕೊಡುವಾಗ ಸಕ್ಕತ್ ಸಿಟ್ಟು ಬರುತ್ತದೆ.
ಹೋಗಿ ನಾಲ್ಕು ಬಾರಿಸಿಬಿಡೋಣ ಅನಿಸುತ್ತದೆ.
ಆಫೀಸ್ ವಾತಾವರಣದಲ್ಲಿ ಡಸ್ಟ್ಬಿನ್ ಇದ್ದರೂ ಸಹ, ಕಾಲಿನ
ಬುಡಕ್ಕೊಂಡು ಡಸ್ಟ್ ಬಿನ್ ಕೊಟ್ಟರೂ
ಸಹ ಲಿಫ್ಟ್, ಆಫೀಸ್ ಹೊರಗಡೆಯಲ್ಲ
ಸಿಗರೇಟ್ ತುಂಡು ಬೆಂಕಿ ಕಡ್ಡಿ,
ಕೋಕ್, ಪೆಪ್ಸೀ, ಫ್ರೂಟಿ ಕ್ಯಾನ್
ಗಳು ಅನಾಥ ಶವಗಳಂತೆ ಬಿದ್ದದ್ದು
ನೋಡಿದರೆ ನಮ್ಮ ಜನರ ಅಶಿಸ್ತು
ನೋಡಿ ಬೇಸರವಾಗುತ್ತದೆ. ಇಷ್ಟು ಓದಿ ಇಂಥ
ಕೆಲಸ ಮಾಡುವ ನಾವು ಹೊರಗಿನವರಿಂದ
ಕಿಸ್, ಸೆಕ್ಸ್, ಬಾರ್, ಪಬ್
ಮೋಜು ಮಸ್ತಿ ಬೇಕು ಅಂತ
ಹುಚ್ಚರಂಥಾಡುತ್ತೇವೆ. ಅಲ್ಲಿನ ಒಳ್ಳೆಯ ಸಂಸ್ಕೃತಿ
ಅರಿತು ಅಳವಡಿಸಿಕೊಳ್ಳಲಿ ನೋಡೋಣ? ಉಹೂಂ.. ಆಗುವುದಿಲ್ಲ..
ಒಳ್ಳೆದು ಬೇಡ. ಮಜಾ ಬೇಕು
ಮಜಾ..
ನನ್ನ ಮೆನೇಜರ್ಗಳು ಕೂಡ
ಬ್ರೇಕ್ ತೆಗೆದುಕೊಂಡಾಗ ಅವರು ಎಷ್ಟು ಸಮಯ
ಹರಟೆ ಹೊಡೆಯುತ್ತಾರೆ ಅನ್ನುವುದನ್ನು ನಾನು ತುಂಬಾ ಸರಿ
ಲೆಕ್ಕವಿತ್ಟಿದ್ದೇನೆ. ಅಮೆರಿಕಾದ ಮೆನೇಜರ್ಗಳು ಯಾವಾಗಲೂ ಸಹಾಯಕ್ಕೆ ಸಿದ್ಧವಿರುವಾಗ
ನಮ್ಮವರು ಬ್ರೇಕ್ ಅಂತ ಗಂಟೆಗಂತಲೆ
ಹರಟೆ ಹೊಡೆಯುತ್ತಿರುತ್ತಾರೆ. ನಿಜಾವಾಗ್ಲೂ ಬೇಜಾರಾಗುತ್ತದೆ.
ಭಾರತ ಪ್ರೀತಿಗೆ ಹೆಸರಾದ
ದೇಶ.. ಅಮ್ಮ ಮಗುವಿಗೆ ಕಮ್ಮಿ
ಅಂದರೂ ಒಂದು ವರ್ಷದವರೆಗೂ ಮೊಲೆ
ಹಾಲು ಕುಡಿಸುವಳು.
ಅವಳ ಸೊಂಟದಿಂದ ಮಗುವನ್ನು
೨ ಮೂರು ವರ್ಷವೂ
ಅಂಟಿಕೊಂಡೇ ಓಡಾಡುವಳು.. ರಾತ್ರಿಯಂತೂ ತನ್ನ ನಿದ್ದೆ ಬಿಟ್ಟು
ಮಗುವನಪ್ಪಿ ತನ್ನ ಮೈಶಾಖ ನೀಡುವಳು..
ತಂದೆಯೂ ಸಹ ಮಗುವನ್ನು ಮಗ್ಗುಲಲ್ಲೇ
ಅಪ್ಪಿ, ಹೆಗಲ ಮೇಲೆ ಕೂರಿಸಿ,
ಬೆನ್ನ ಮೇಲೆ ಹೊತ್ತು ಬೆಚ್ಚಗೆ
ಬೆಳೆಸುವನು. ಓದು ಮುಗಿದು ಮದುವೆಯಾದರೂ
ಸಹ ನಮ್ಮ ಭಾರವ ಚಿಕ್ಕಂದಿನಲ್ಲಿ
ಹೊತ್ತ ಉಪ್ಪಿನ ಮೊಟೆಯಂತೆಯೆ ಹೊರುವನು.
ಬಾಂಧವ್ಯಕ್ಕೆ ಬೆಲೆ ಕೊಡುವ ದೇಶ
ನಮ್ಮದು.
ಮುತ್ತು ಅಥವಾ ಲೈಂಗಿಕ
ಕ್ರಿಯೆಗೆ ನಮ್ಮಲ್ಲಿ ನಮ್ಮಲ್ಲಿ ಅದರದೇ
ಆದ ತೀರಾ ಖಾಸಗಿ ಅರ್ಥವಿದೆ.
ಮುತ್ತು ಒಂದು ಅತ್ಯಂತ ಮಧುರ
ಭಾವನೆ. ನಾವು ತೀರಾ ಇಷ್ಟ
ಪಡುವ ವ್ಯಕ್ತಿಯೊಬ್ಬನಿಗೆ ಅಥವಾ ಒಬ್ಬಳಿಗೆ ತೀರಾ
ಖಾಸಗಿಯಾಗಿ ನೀಡುವಂತಹ ಪ್ರೀತಿಯ ಸೂಚಕ. ಅದನ್ನು
ಯಾರಿಗೂ ತೋರದೆ ಅವರಿಗೆ ಕೊಟ್ಟು
ನಾ ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅಂತ
ನಿನಗೆ ಮಾತ್ರ ಗೊತ್ತು.. ಬೇರೆಯವರಿಗೆ
ಅರ್ಥವಾಗದು. ಅದಕ್ಕೆ ಇದನ್ನ ನಿನಗಾಗೆ
ನೀಡುತ್ತಿದ್ದೇನೆ. ಅರ್ಥ ಮಾಡಿಕೊ ಅಂತ
ಹೇಳುವ ರೀತಿ ಅದು. ನಾಲ್ಕು
ಜನರಿಗೆ ತೋರಿಸುವಂತಹ ಅವಶ್ಯಕತೆ ನಮ್ಮಲ್ಲಿಲ್ಲ.. ಪ್ರೀತಿಯನ್ನು ತೋರಿಸಿ ಮಾಡುವ ಅವಶ್ಯಕತೆ
ಭಾರತೀಯರಿಗೆ ಇಲ್ಲಾರೀ. ಅರ್ಥ ಮಾಡ್ಕೊಳಿ. ಅದು
ನಮ್ಮ ಸಂಸ್ಕೃತಿಯಲ್ಲಿಯೇ ಇದೆ. ಅದು ನಮ್ಮ
ರಕ್ತದಲ್ಲಿ ಬೆರೆತಿದೆ. ನಮ್ಮಿಂದ ಪಾಶ್ಚಾತ್ಯರು ಅದನ್ನು
ಕಲಿಯಲು ಇಷ್ಟಪಡುತ್ತಾರೆ. ಅಲ್ಲಿಯ ದೇಶಗಳಲ್ಲಾಗುವಷ್ಟು ಆತ್ಮಹತ್ಯೆ,
ಮಾನಸಿಕ ಖಿನ್ನತೆ ನಮ್ಮ ಜನರಲ್ಲಾಗುವುದಿಲ್ಲ.
ಯಾಕೆ? ನಮ್ಮ ಸಂಸ್ಕೃತಿ ಅದು.
ಒಳ್ಳೆಯದನ್ನು
ಕಲಿಯೋಣ.. ಸುಮ್ಮನೆ ಬೇಡದೆ ಇರುವುದಕ್ಕೆ
ತಲೆ ಹಾಳು ಮಾಡಿಕೊಂಡು ಮೂರ್ಖರಂತೆ
ವರ್ತಿಸುವುದಾದರೆ, ನಮ್ಮನ್ನು ತಂದೆ ತಾಯಿ ಓದಿಸಿ
ಪ್ರಯೋಜನ ಏನು? ಎಂತ ಯುವಜನತೆಯೋ?
ಎಂತ ಉದ್ಧಾರ ಮಾಡ್ತಾರೋ? ಇಷ್ಟರ
ಮೇಲೆ ಹೊರಗೆ ಮುತ್ತು ಕೊಟ್ಟು
ತೋರಿಸಬೇಕ? ತೋರಿಸ್ರಪ್ಪ..! ಅರ್ಥವಿಲ್ಲದ ಮಾತಿಗೆ ಸುಮ್ಮನಿರುವುದೆ ಉತ್ತರ
ಅಂತ ಕುವೆಂಪು ಮಾತನ್ನು ಮನಸ್ಸಿಲ್ಲಿತ್ತು
ಸುಮ್ಮನಾಗುತ್ತೇವೆ.


It makes me feel happy reading the above blog to know about our strong customs n cultures ... It has become a showoff now a days to flaunt the western cultures in our generation nevertheless we also know our limits when it comes to romance in public .. Hats off to our elders for rooting suchha strong cultural lessons to us n carrying it forward would be our gift to them is what I believe in.
ReplyDeleteAmazing writing bro .. Taunt to those kaam chors in the office place is really catchy ;)